ದಾಂಡೇಲಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರರವರ ಕುರಿತು ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ದೇಶದ ಜನತೆಯಲ್ಲಿ ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸೇನೆ ಮತ್ತು ಆದಿ ಜಾಂಬವಂತ ಸಂಘದ ವತಿಯಿಂದ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರರ ಮೂಲಕ ಸಲ್ಲಿಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ನಡಿಗೇರ್, ಸಂಘಟನೆಯ ಪ್ರಮುಖರುಗಳಾದ ಎಚ್. ಗೋಪಾಲ್, ಬಸವರಾಜ್ ಮೇತ್ರಿ, ಸುರೇಶ ಕೇದಾರಿ, ದತ್ತು ಮಾಳಿಗೆ, ಶ್ರೀನಿತ್ಯ ಕಾಂಬಳೆ, ಸರಸ್ವತಿ ಚವ್ಹಾಣ್, ರೇಣುಕಾ ಮಾದರ್, ಆಯಿಷಾ ಮುಕಾಶಿ, ಹುಸೇನಮಿಯಾ ಸವಣೂರ್, ಗಣೇಶ್ ಮಾಳಿಗೆ, ರಾಜು ಸಣ್ಣತಮ್ಮನವರ್, ಸದಾಶಿವ ಕಾಂಬ್ಳೆ, ಸುನಿಲ್ ಕಾಂಬ್ಳೆ, ಹನುಮಂತಪ್ಪ ಹರಿಜನ, ಶಿವಕುಮಾರ ಮೇತ್ರಿ, ರಾಮು ಹಂಚಿನಮನಿ, ಕುಮಾರ್, ವಿಶಾಲ್ ಕಾಂಬ್ಳೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.