ದಾಂಡೇಲಿ : ನಗರದ ಅಂಬೇವಾಡಿ – ಬಸವೇಶ್ವರ ನಗರದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಅಳವಡಿಕೆಗೆ ರಸ್ತೆಯಲ್ಲೆ ಹೊಂಡವನ್ನು ಅಗೆದು ತಿಂಗಳು ಕಳೆದರೂ, ಇನ್ನೂ ಮುಚ್ಚದೆ ಇರುವುದರಿಂದ ಅವಘಡಗಳು ನಡೆಯಲು ಕಾರಣವಾಗಿದೆ.
ಯು.ಎಸ್.ಪಾಟೀಲ್ ಅವರ ಮನೆಯ ಹತ್ತಿರವೇ ರಸ್ತೆಯಲ್ಲಿ ಹೊಂಡವನ್ನು ಅಗೆಯಲಾಗಿದ್ದು ಪೈಪ್ಲೈನ್ ಅಳವಡಿಸಿದರೂ, ಹೊಂಡವನ್ನು ಮಾತ್ರ ಈವರೆಗೆ ಮುಚ್ಛೇದೆ ಹಾಗೇನೇ ಬಿಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.