Slide
Slide
Slide
previous arrow
next arrow

ಅರಣ್ಯವಾಸಿಗಳಿಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ, ಪಟ್ಟ ಮಾತ್ರ ಇಲ್ಲ: ರವೀಂದ್ರ ನಾಯ್ಕ

300x250 AD

ಅಂಕೋಲಾ: ತಲಾತರದಿಂದ ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರ ಎಲ್ಲಾ ರೀತಿಯ ಸೌಲಭ್ಯ ನೀಡಿದೆ. ಆದರೆ ಅರಣ್ಯ ಭೂಮಿ ಹಕ್ಕು ನೀಡಲು ಸಾಧ್ಯವಾಗುತ್ತಿಲ್ಲ. ಇಂದು ಅರಣ್ಯವಾಸಿ ಕಾನೂನಿನ ಸಂಕೋಲೆಯಲ್ಲಿ ಸಿಲುಕಿದ್ದಾನೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಅವರು ಡಿ.28ರಂದು ಅಂಕೋಲಾ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಸಮಾಲೋಚನಾ ಸಭೆಯಲ್ಲಿ ಅರಣ್ಯವಾಸಿಗಳನ್ನುದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.

ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಅವಶ್ಯ. ಅರಣ್ಯ ಭೂಮಿ ಹಕ್ಕು ಪಡೆಯುವಲ್ಲಿ ನಿರಂತರ ೩ ದಶಕದ ಹೋರಾಟ ಅರಣ್ಯವಾಸಿಗಳ ನೈತಿಕ ಸ್ಥೇರ್ಯ ಹೆಚ್ಚಿಸಿದೆ. ಕಾನೂನು ಪರಿಪಾಲನೆಯಲ್ಲಿ ಅಧಿಕಾರಿ ವರ್ಗಗಳ ಹಸ್ತಕ್ಷೇಪದಿಂದ ಹಾಗೂ ಕಾನೂನು ಅರ್ಥೈಸುವಲ್ಲಿ ಉಂಟಾದ ಗೊಂದಲದಿಂದ ಅರಣ್ಯವಾಸಿಗಳು ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.

300x250 AD

ಸಭೆಯಲ್ಲಿ ಸುಮೇಶ ಗೌಡ ಸ್ವಾಗತಿಸಿದರು. ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಶಂಕರ ನಾಯ್ಕ ಅಧ್ಯಕ್ಷತೆ ವಯಸಿದರು. ಸಂಚಾಲಕರಾದ ರಾಜೇಶ ಮಿತ್ರ ನಾಯ್ಕ, ವಿಜು ಪೀಟರ್ ಪಿಲ್ಲೆ, ಶಂಕರ ನಾಯಕ್, ಜನ್ನ ಗೌಡ, ಮಂಗೇಶ ಬಾಬು ಗೌಡ, ಅರವಿಂದ ಗೌಡ, ದೇವರಾಜ ನಾಯಕ, ಗುಲಾಬಿ ಗೌಡ, ಸೋಮೇಶ್ವರ ಗೌಡ, ನಾಗರಾಜ ನಾಯ್ಕ, ಗಣೇಶ ನಾಯ್ಕ, ರಾಜೇಶ ನಾಯ್ಕ ಉಪಸ್ಥಿತರಿದ್ದರು.

ಹೋರಾಟ ನಿರಂತರ:
ಅರಣ್ಯ ಅತಿಕ್ರಮಣದಾರರಿಗೆ ಅರಣ್ಯ ಭೂಮಿ ಹಕ್ಕು ಅನಿವಾರ್ಯ. ಅರಣ್ಯ ಭೂಮಿ ಹಕ್ಕು ಸಿಗುವರೆಗೂ ಹೋರಾಟ ಮುಂದುವರೆಸಲಾಗುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ  ಹೇಳಿದರು.

Share This
300x250 AD
300x250 AD
300x250 AD
Back to top