Slide
Slide
Slide
previous arrow
next arrow

ಭಾರತೀಯ ಪ್ರದರ್ಶನ ಕಲೆಗಳಿಗೆ ಭರತನ ನಾಟ್ಯ ಶಾಸ್ತ್ರವೇ ಆಧಾರ: ಅಶೋಕ ಹಾಸ್ಯಗಾರ

300x250 AD

ಶಿರಸಿ: ಭಾರತೀಯ ಪ್ರದರ್ಶನ ಕಲೆಗಳಿಗೆ, ಭರತನ ನಾಟ್ಯ ಶಾಸ್ತ್ರವೇ ಆಧಾರವಾದುದಲ್ಲದೇ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಕಲಾ ಸಂವಿಧಾನವಾಗಿದೆ ಎಂದು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಹೇಳಿದರು.

ಅವರು ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಅಮೇರಿಕಾದ ನಾಟ್ಯ ಥಿಯೇಟರ್ ಸಂಸ್ಥಾಪಕರಾದ ವಿದುಷಿ ಹೇಮಾ ರಾಜಗೋಪಾಲನ್ ಮತ್ತು ವಿದುಷಿ ಕೃತಿಕಾ ರಾಜಗೋಪಾಲನ್ ಶಿಷ್ಯೆ ಹಾಗೂ ಶಿರಸಿಯ ದಿ. ಆರ್.ಎಸ್. ಭಟ್ ಚಿತ್ರಗಿ ಮತ್ತು ಶ್ರೀಮತಿ ಸೀತಾ ದಂಪತಿ ಮೊಮ್ಮಗಳಾದ ಕು|| ಪೂರ್ಣಾ ಭಟ್ ರವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಲೆ, ಜ್ಞಾನ, ಶಿಲ್ಪ, ವಿದ್ಯೆ, ಯೋಗ, ಕರ್ಮ ಮುಂತಾಗಿ ಸರ್ವ ವ್ಯಾಪಾರವೂ ಒಳಗೊಂಡಿರುವ ನಾಟ್ಯಶಾಸ್ತçವು ತಾತ್ತ್ವಿಕವಾಗಿಯೂ ಭಾರತೀಯರ ಸಾಂಸ್ಕೃತಿಕ ಸಂಪದ್ಭರಿತ ಮಾಧ್ಯಮವಾಗಿದೆ ಎಂದು ನುಡಿದ ಅವರು ಭಾರತೀಯರಿಗೆ ಕಲಾಪ್ರಕಾರಗಳೆಲ್ಲವೂ ಪಾವಿತ್ರಿಕವೂ ದೈವಿಕವೂ ಆಗಿರುವುದಕ್ಕೆ ಇದೇ ಕಾರಣವಾಗಿದೆಯೆಂದರು. ಭರತನಾಟ್ಯವು ನೃತ್ಯ, ನೃತ್ಯ ಹಾಗೂ ನಾಟ್ಯ ಈ ಮೂರು ಪ್ರಕಾರಗೊಳನ್ನೊಳಗೊಂಡ ಪರಿಪೂರ್ಣ ಕಲೆಯಾಗಿದೆ. ಇದನ್ನು ಶೈಕ್ಷಣಿಕ ಪಠ್ಯದಲ್ಲಿಯೇ ಅಳವಡಿಸುವುದು ಅವಶ್ಯಕವೆಂದು ಅಭಿಪ್ರಾಯ ಪಟ್ಟರು.

300x250 AD

ಅಭ್ಯಾಗತರಾಗಿ ಆಗಮಿಸಿದ್ದ ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಗಾರ, ಮನುಷ್ಯನ ಬದುಕೇ ಕಲಾತ್ಮಕವಾದದ್ದು ಕಲೆಯು ಮನುಷ್ಯನನ್ನು ಸಂಸ್ಕೃತವಂತನನ್ನಾಗಿ ಮಾಡುತ್ತದೆ ಅಲ್ಲದೇ ಬೇರೆಲ್ಲಾ ಪ್ರಾಣಿಗಳಿಗಿಂತ ಭಿನ್ನನಾಗಿ ಗುರುತಿಸಿಕೊಳ್ಳಲು ಕಲೆಯು ಕಾರಣವಾಗಿದೆ ಎಂದರು. ಭಾರತೀಯ ಸಾಂಸ್ಕೃತಿಕ ಸಂಪದ್ಭರಿತ ಭರತನಾಟ್ಯವನ್ನು ಅಮೇರಿಕದಲ್ಲಿಯೂ ಪ್ರದರ್ಶಿಸುತ್ತ ಹಿರಿಮೆ-ಗರಿಮೆಗಳನ್ನು ವಿಸ್ತರಿಸುತ್ತಿರುವ ಕು|| ಪೂರ್ಣಾ ಭಟ್ ರವರ ಪರಿಶ್ರಮ ಇನ್ನಷ್ಟು ವಿಸ್ತಾರಗೊಳ್ಳಲಿ, ಅದರಿಂದ ಅವರಿಗೆ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ, ಮನ್ನಣೆಗಳು ದೊರಕಲಿ ಎಂದು ಹಾರೈಸಿದರು. ಇನ್ನೋರ್ವ ಅತಿಥಿಗಳಾದ ನಿವೃತ್ತ ಉಪನ್ಯಾಸಕ ಶಂಭು ಭಟ್, ಪೂರ್ಣಾ ಭಟ್ ರವರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಭಾರತೀಯ ಕಲೆಯನ್ನು ಅಮೇರಿಕದಲ್ಲಿ ಕಲಿತು ವೈಶ್ವಿಕ ಮಟ್ಟಕ್ಕೊಯ್ಯಲು ಪ್ರಯತ್ನಿಸುವುದು ಶ್ಲಾಘನೀಯವೆಂದರು. ವೇದಿಕೆಯ ಮೇಲೆ ಪೂರ್ಣಾ ಭಟ್ ತಾಯಿ ಸುವರ್ಣಾ ಭಟ್ ಉಪಸ್ಥಿತರಿದ್ದರು.
ಆಮೇಲೆ ಪೂರ್ಣಾ ಭಟ್ ಸ್ವರ, ಲಯಮ್, ತ್ರಿಪುರ ಸುಂದರಿ, ದಶಾವತಾರಮ್, ಅಭಯಂಕರಮ್ ಹಾಗೂ ಕೊನೆಯಲ್ಲಿ ಶಂಭೋ ಹರ ಹರ ಶಂಭೋ ನಾಟ್ಯವನ್ನು ಪ್ರಸ್ತುತ ಪಡಿಸಿದರು. ತಂಜಾವೂರು ಶೈಲಿಯ ಈ ನಾಟ್ಯವು ಸಹೃದಯರ ಮನಸೊರೆಗೊಂಡು ಪ್ರೇಕ್ಷಕರ ಕರತಾಡನದ ಪ್ರೋತ್ಸಾಹ ದೊರೆಯಿತು.
ಈ ಮಧ್ಯೆ ಕು. ಪೃಥ್ವಿ ಹೆಗಡೆ ಬೊಮ್ನಳ್ಳಿ ಅವರ ಗಾನಸುಧೆಯು ವಿಶೇಷ ಗಮನ ಸೆಳೆಯಿತು. ವಿದುಷಿ ರೇಖಾ ದಿನೇಶ್ ಅವರ ಶಿಷ್ಯೆಯಾಗಿರುವ ಇವರು ದಾಸರ ಪದ, ಮರಾಠಿ ಅಭಂಗಗಳ ಮೂಲಕ ಭರವಸೆಯ ಗಾಯಕಿಯಾಗಿ ತೋರಿಸಿಕೊಂಡರು. ಇವರಿಗೆ ಹಾರ್ಮೋನಿಯಂನಲ್ಲಿ ಕು|| ಅಂಜನಾ ಹೆಗಡೆ ಶಿರಸಿ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜಿಬಳ ರವರು ಸಮರ್ಥ ಸಾಥ ನೀಡಿದರು. ಗಿರಿಧರ ಕಬ್ನಳ್ಳಿ ಕರ‍್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Share This
300x250 AD
300x250 AD
300x250 AD
Back to top