ಶಿರಸಿ: ಪ್ರತಿ ವರ್ಷ ಜುಲೈ 1 ಲಯನ್ಸ್ ಕ್ಲಬ್ಗಳಿಗೆ ಹೊಸ ವರ್ಷದ ದಿನ. ಆ ಹಿನ್ನೆಲೆಯಲ್ಲಿ ಶಿರಸಿ ಲಯನ್ಸ್ ಕ್ಲಬ್ನ 2025-26ನೇ ಸಾಲಿನ ನೂತನ ಅಧ್ಯಕ್ಷರಾದ ಲಯನ್ ಗುರುರಾಜ ಹೊನ್ನಾವರ, ಕಾರ್ಯದರ್ಶಿಯವರಾದ ಲಯನ್ ಮನೋಹರ ಮಲ್ಮನೆ ಹಾಗೂ ಲಯನ್ ಪ್ರಕಾಶ ಹೆಗಡೆ ಕೂಡಿ ಲಯನ್ಸ್ ಬಂಧುಗಳಿಗೆ ಲಯನ್ಸ್ ಭವನದಲ್ಲಿ ಬೆಳಗ್ಗೆ 6.30 ರಿಂದ 7.50ರವರೆಗೆ ಯೋಗ ಹಾಗೂ ಧ್ಯಾನ ಕಾರ್ಯಕ್ರಮವನ್ನು ಏರ್ಪಡಿಸಿದರು.
ಶುಭ ಮುಂಜಾವಿನಲ್ಲಿ ಲಯನ್ ಪ್ರಭಾಕರ ಹೆಗಡೆ, ಲಯನ್ ಲೋಕೇಶ ಹೆಗಡೆ, ಲಯನ್ ಅಶೋಕ ಹೆಗಡೆ, ಲಯನ್ ಪ್ರತಿಭಾ ಹೆಗಡೆ, ಲಯನ್ ಜ್ಯೋತಿ ಅಶ್ವತ್ಥ, ಲಯನ್ ಜ್ಯೋತಿ ಅಶೋಕ ಹಾಗೂ ಲಯನ್ ಪ್ರವೀಣಾ ಶೇಟ್ ಎಲ್ಲರೂ ನೂತನ ಪದಾಧಿಕಾರಿಗಳೊಂದಿಗೆ ಕೂಡಿ ಸಾಮೂಹಿಕವಾಗಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ನಂತರ ಲಯನ್ ಅರ್ಚನಾ ಹೆಗಡೆಯವರ ತರಬೇತಿಯೊಂದಿಗೆ ಯೋಗ-ಧ್ಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಪ್ರಾರಂಭದಲ್ಲಿ ಲಯನ್ಸ್ ನೂತನ ಅಧ್ಯಕ್ಷರಾದ ಲಯನ್ ಗುರುರಾಜ ಹೊನ್ನಾವರ ಎಲ್ಲರನ್ನು ಸ್ವಾಗತಿಸಿ ಯೋಗದ ಮಹತ್ವದ ಕುರಿತು ತಿಳಿಸಿದರು. ಕೊನೆಯಲ್ಲಿ ಲಯನ್ಸ್ ಕಾರ್ಯದರ್ಶಿಯಾದ ಲಯನ್ ಮಲ್ಮನೆಯವರು ವಂದಿಸಿದರು.