Slide
Slide
Slide
previous arrow
next arrow

ಶಿರಸಿಯಲ್ಲಿ ಮನರಂಜಿಸಿದ ‘ಗಾನ ನಮನ’

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಜನನಿ ಮ್ಯೂಸಿಕ್ ಸಂಸ್ಥೆ ಹಾಗೂ ಹಾಡುವ ಗೂಡು ಇವರ ಸಹಯೋಗದಲ್ಲಿ ಡಿ. 25ರಂದು “ಗಾನ ನಮನ” ಎಂಬ ಅಪರೂಪದ ಅದ್ಭುತ ಕಾರ್ಯಕ್ರಮ ನಯನಾ ಸಭಾಂಗಣದಲ್ಲಿ ನಡೆಯಿತು. ದಂತಕಥೆಯಾದ ಮೊಹಮ್ಮದ್ ರಫಿ ಹಾಗೂ ಹಿಂದಿ ಚಿತ್ರರಂಗದ ಷೋ ಮ್ಯಾನ್ ರಾಜ್ ಕಪೂರ್ ಈ ಇಬ್ಬರು ಮಹನೀಯರ ಶತಮಾನೋತ್ಸವದ ಅಂಗವಾಗಿ ಇದನ್ನು ಆಯೋಜಿಸಲಾಗಿತ್ತು.ಹಳೆಯ ಅದ್ಭುತ ಹಿಂದಿ ಚಿತ್ರಗೀತೆಗಳನ್ನು ಸ್ಥಳೀಯ ಕಲಾವಿದರು  ಅತ್ಯಂತ ಸುಮಧುರವಾಗಿ ಹಾಡಿ ಒಂದು ಹೊಸ ಲೋಕವನ್ನೇ ಸೃಷ್ಟಿಸಿದರು.

ಗಣೇಶ ಕೂರ್ಸೆ ಅವರು ಪತ್ತರಕೆ ಸನಮ್ ಮೇರೆ  ಮನಕಿ  ಗಂಗಾ ಹಾಡುಗಳನ್ನು ಅತ್ಯದ್ಭುತವಾಗಿ ಪ್ರಸ್ತುತಪಡಿಸಿದರು. ಗಣೇಶ ಹೆಗಡೆ ಅವರು ಮೇರಾ ಜೂತಾ ಹೈ ಜಪಾನಿ  ತೇರಿ ಪ್ಯಾರಿ ಪ್ಯಾರಿ ಸೂರತ್ ಕೋ ಹಾಡುಗಳನ್ನು  ದಿನೇಶ್ ಭಾಗವತ್ ಅವರು  ಜಾನೆ ಕಹಾ  ಬಹಾರೋ ಫೂಲ್ ಬರಸಾವೋ, ಪ್ರವೀಣ್ ಕಾಮತ್ ಅವರು ಅರೆ  ಐಸಾ ಮೌಕಾ ಫಿರ್ ಕಹಾ ಮಿಲೇಗಾ ಪುಕಾರತಾ ಚಲಾ ಹು ಮೈ ಹಾಡುಗಳನ್ನು ಅತ್ಯಂತ ಮನ ಮುಟ್ಟುವಂತೆ ಹಾಡಿ ರಾಘವೇಂದ್ರ ಸಕಲಾತಿ ಅವರು ತೇರೆ ಮೇರೇ  ಸಪನೆ  ಬದನ್ ಪೇ ಸೀತಾರೆ ಹಾಡುಗಳನ್ನು ಅತ್ಯಂತ ಸುಮಧುರವಾಗಿ ಪ್ರಸ್ತುತಪಡಿಸಿ  ಅಮಿತ್ ಹಿರೇಮಠ್ ರವರ ಚಾಹೇ ಕೋಯಿ ಮುಜೆ ಲಿಖೇ   ಜೋ ಖತ್ ತುಜೆ  ಸಂತೋಷ್  ಶೇಟ್ ರವರು  ಖೋಯಾ  ಖೋಯಾ ಚಾಂದ್ ಜೀನಾ ಯಹಾ ರೇಖಾ ಭಟ್ ಅವರ ತೇರಿ ಆಖೋ ಕೆ  ಸಿವಾ  ಆಪಕೆ ನಜರೋನೇ  ಸಮಝಾ  ರೇಷ್ಮಾ ಕಿರಣ್ ಅವರ ಗುಲಾಬಿ  ಆಖೆ  ಕ್ಯಾ ಹುವಾ  ತೇರಾ ವಾದಾ ಹಾಗೂ  ಆಶಾ ಶಿರ್ಸಿಕರ್ ರವರ  ಘರ್ ತುಮ್ ಭುಲಾ ನ ದೋಗೆ  ಭಾಗ್ಯ  ಸುನ್ ಸಾಯ್ಬಾ  ಸುನ್ ಸತ್ಯಮ್ ಶಿವಂ ಸುಂದರಂ  ಗೀತೆಗಳನ್ನು  ಉತ್ತಮವಾಗಿ ಪ್ರಸ್ತುತಿ ಪಡಿಸಿದರು. 

ಕಿತನಾ ಪ್ಯಾರಾ ವಾದಾ ಹೈ ,ಗುನ್ ಗುನಾರ ಹೀ ಹೈ ಭವರೇ , ಏ ರಾತ್  ಭೀಗಿ ಭೀಗಿ, ಜಿಲ್ಮಿಲ್ ಸಿತಾರೋ ಕಾ, ಆಜ್ ಕಲ್ ತೇರೆ ಮೇರೆ ಪ್ಯಾರಕಿ ಕಿ, ಚುಪ್ಪು ಗಯೇ ಸಾರಿ, ಆಜಾ ಸನಮ್, ಯಮ್ಮಾ ಯಮ್ಮಾ ಮುಂತಾದ ಯುಗಳ ಗೀತೆಗಳು ಅತ್ಯಂತ ಸೊಗಸಾಗಿ ಮೂಡಿ ಬಂತು.

300x250 AD

 ಸಹನಾ ಜೋಶಿ  ಕಾರ್ಯಕ್ರಮವನ್ನು ನಿರ್ವಹಿಸಿದರು. ದಿನೇಶ್ ಹೆಗಡೆ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿದರೆ, ಗಣೇಶ್ ಕೂರ್ಸೆ ವಂದಿಸಿದರು. ಹಳೆಯ ಚಿತ್ರಗೀತೆಗಳನ್ನು ಜೀವಂತವಾಗಿ ಇರಿಸುವದರ ಜತೆಗೆ ಎಲ್ಲರಿಗೂ ವೇದಿಕೆ ಒದಗಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ರೇಖಾ ದಿನೇಶ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅತ್ಯಂತ  ಯಶಸ್ವಿಯಾಗಿ ಮೂಡಿ ಬಂತು.

Share This
300x250 AD
300x250 AD
300x250 AD
Back to top