Slide
Slide
Slide
previous arrow
next arrow

ರಾಷ್ಟ್ರೀಯ ಮೋಟರ್ ಸೈಕಲ್ ರೇಸ್: ಸ್ಪರ್ಧೆ ಸೋತರೂ ಮನಗೆದ್ದ ದಾಂಡೇಲಿಯ ‘ಪ್ರೇಮಾನಂದ’

300x250 AD

ವರದಿ : ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : ಸ್ಲೋ ಮೋಟರ್ ಸೈಕಲ್ ರೇಸ್‌ನ ಸ್ಲೋ ಬೈಕ್ ರೇಸಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಂಡೇಲಿಗೆ ಪ್ರಪ್ರಥಮ ಬಹುಮಾನ ಬರಬೇಕಿತ್ತು. ಆದರೆ ಕೊನೆ ಕ್ಷಣದ ಚಿಕ್ಕ ತಪ್ಪಿನಿಂದಾಗಿ ದಾಂಡೇಲಿಯ ಸ್ಪರ್ಧಿಯೊಬ್ಬರು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಮೋಟರ್ ಸೈಕಲ್ ರೇಸಿನಲ್ಲಿ ನಗರದ ಉದ್ಯಮಿ ಹಾಗೂ ಪ್ರೇಮ್ ವುಡ್ ಇಂಡಸ್ಟ್ರೀಸ್ ಮಾಲಕ ಮತ್ತು ಕ್ರೀಡಾಪಟುವಾಗಿರುವ ಪ್ರೇಮಾನಂದ ಗವಸ ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ಸ್ಲೋ ಮೋಟರ್ ಸೈಕಲ್ ರೇಸ್ ವಿಭಾಗದಲ್ಲಿ ಭಾಗವಹಿಸಿದ್ದ ಪ್ರೇಮಾನಂದ ಗವಸ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆಯಬೇಕಿತ್ತು. ಚಾಕಚಾಕ್ಯತೆಯಿಂದ ತನ್ನ ಬುಲ್ಲೆಟ್ ಬೈಕನ್ನು ನಿಧಾನಗತಿಯಲ್ಲಿ ಓಡಿಸಿದ ಪ್ರೇಮಾನಂದ ಗವಸ ಮಿಕ್ಕುಳಿದು, ಎಲ್ಲಾ ಸ್ಪರ್ಧಿಗಳು ಮುಂದೆ ಹೋಗಿದ್ದರು. ಇದನ್ನು ನೋಡಿದ ತಕ್ಷಣ, ತಾನು ಗೆಲುವು ಸಾಧಿಸಿದೆ ಎಂಬ ಸಂತಸದಲ್ಲಿ, ಅಂತಿಮ ಗೆರೆಯ ಮನ್ನವೇ ಕಾಲನ್ನು ಕೆಳಗಿಟ್ಟು, ಗೆಲುವಿನ ಸಂಭ್ರಮವನ್ನು ತನ್ನದಾಗಿಸಿಕೊಂಡರು. ಸ್ಲೋ ಬೈಕ್ ರೇಸ್ ನಲ್ಲಿ ಎಲ್ಲರೂ ಹೋದ ನಂತರ ಉಳಿದವರು ಪ್ರೇಮಾನಂದ ಗವಸ ಒಬ್ಬರೇ ಆಗಿದ್ದರು. ಹಾಗಾಗಿ ಬಹುಮಾನ ಅವರಿಗೆ ಕೊಡಬೇಕಿತ್ತು. ಈ ಬಗ್ಗೆ ಕೆಲ ಹೊತ್ತು ತೀರ್ಪುಗಾರರ ನಡುವೆ ಚರ್ಚೆಯು ನಡೆಯಿತು. ಆದರೆ ಅಂತಿಮ ಗೆರೆಯನ್ನು ದಾಟಿದ ನಂತರವೇ ನೆಲಕ್ಕೆ ಕಾಲಿಡಬೇಕೆಂಬ ನಿಯಮವು ಪ್ರೇಮಾನಂದ ಗವಸ ಅವರ ಚಾಂಪಿಯನ್ ಪಟ್ಟಕ್ಕೆ ಮುಳ್ಳಾಗಿ ಪರಿಣಮಿಸಿತು. ಈ ನಿಯಮ ಅಲ್ಲಿದ್ದ ಎಲ್ಲರಗೂ ಬೇಸರವನ್ನು ತಂದೊಡ್ಡಿತ್ತು. ಅನಿವಾರ್ಯವಾಗಿ ಪ್ರೇಮಾನಂದ ಗವಸ ಗೆದ್ದು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

300x250 AD

ರಾಷ್ಟ್ರದ ವಿವಿಧೆಡೆಗಳ ಸಾವಿರಾರು ಮೋಟಾರ್ ಬೈಕುಗಳು ವಿವಿಧ ವಿಭಾಗಗಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಹಿಂದೆಯೂ ಪ್ರೇಮಾನಂದ್ ಕಮಲ್ ಕಪ್, ವಿಜಯ ಕರ್ನಾಟಕ ಕಪ್ ಹೀಗೆ ಸಾಕಷ್ಟು ಮೋಟಾರ್ ಬೈಕ್ ರೇಸ್ ನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುವುದನ್ನು ಇಲ್ಲಿ ಉಲ್ಲೇಖನೀಯ. ಏನೇ ಇರಲಿ ಪ್ರಯತ್ನ ಸದಾ ಇದ್ದಾಗ ಅವಕಾಶ ಬಂದೇ ಬರುತ್ತದೆ. ಪ್ರಯತ್ನ ನಿರಂತರವಾಗಿರಲಿ, ಫಲ ಕಟ್ಟಿಟ್ಟ ಬುತ್ತಿ ಎನ್ನುವ ಆಶಯ ಮತ್ತು ಹಾರೈಕೆ ನಮ್ಮದು.

Share This
300x250 AD
300x250 AD
300x250 AD
Back to top