ಶಿರಸಿ: ಇಲ್ಲಿನ ಸುಶ್ರಾವ್ಯ ಸಂಗೀತ ಟ್ರಸ್ಟ್‌ನ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ.29, ರವಿವಾರದಂದು ಮಧ್ಯಾಹ್ನ 3.30ಕ್ಕೆ ನಗರದ ನೆಮ್ಮದಿ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಿಶ್ವಂಬರ ಪತ್ರಿಕೆ ಸಂಪಾದಕ ಅನಂತಮೂರ್ತಿ ಹೆಗಡೆ ಉದ್ಘಾಟಿಸಲಿದ್ದು, ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆಯ ಡಾ.ರಮೇಶ್ ಹೆಗಡೆ ಆಗಮಿಸಲಿದ್ದಾರೆ.
ವಿದ್ಯಾಲಯದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮದ ನಂತರ ಆಮಂತ್ರಿತ ಕಲಾವಿದೆ ಕು. ಸಂಜನಾ ಭಟ್ ಬೆಂಗಳೂರು ಇವರಿಂದ ಹಿಂದೂಸ್ತಾನಿ ಗಾಯನ ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಭವ್ಯಾ ಭಟ್ ಇವರ ಗಾಯನ ಕಾರ್ಯಕ್ರಮ ನಡೆಯಲಿದ್ದು, ಇವರಿಗೆ ತಬಲಾದಲ್ಲಿ ಮಂಜುನಾಥ ಮೋಟಿನ್ಸರ್, ದಿನೇಶ ಹೆಗಡೆ ಗಿಳಿಗುಂಡಿ, ಹಾರ್ಮೋನಿಯಂನಲ್ಲಿ ಉನ್ನತಿ ಕಾಮತ್ ಸಹಕರಿಸಲಿದ್ದಾರೆ.