ಹಳಿಯಾಳ: ಕಳ್ಳತನ ಪ್ರಕರಣ ದಾಖಲಾಗಿದ್ದ ಆರೋಪಿಯೋರ್ವ 2017ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎನ್ನಲಾಗಿದ್ದು, ಇದೀಗ ಆತನನ್ನು ಹಳಿಯಾಳ ಪೋಲೀಸ್ ಠಾಣೆಯ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
78 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಶಿವರಾಜ ಅಲಿಯಾಸ ಶಿವು ರುದ್ರಯ್ಯ ಹಿರೇಮಠ ಜಾಮೀನಿನ ಮೇಲೆ 2017ರಲ್ಲಿ ಹೊರಗಿದ್ದನು.ಆದರೆ ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ಆತ ತಲೆಮರೆಸಿಕೊಂಡಿದ್ದನೆಂದು ತಿಳಿದುಬಂದಿದೆ.
ಸಿಪಿಐ ಜಯಪಾಲ ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್ಐ ವಿನೋದ ಎಸ್.ಕೆ. ಹಾಗೂ ಪಿಎಸ್ಐ ಕೆ. ಎನ್. ಅರಕೇರಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಎಎಸ್ಐ ಸಂಜು ಅಣ್ಣಿಕೇರಿ, ಸಿಬ್ಬಂದಿಗಳಾದ ಗಳಾದ ಭೀಮಣ್ಣ ಕೆ., ನಬೀಸಾಬ ಬೈರವಾಡಗಿ, ಸಂತೋಷ ಲಮಾಣಿ ಹಾಗೂ ಸಿಪಿಸಿ ರಾಘವೇಂದ್ರ ಕೆರೆವಾಡ ಪಾಲ್ಗೊಂಡಿದ್ದರು.