ಶಿರಸಿ:ಶಿರಸಿ ತಾಲೂಕಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ತಾಲೂಕಾ ಕೃಷಿ ನಿರ್ದೇಶಕರು ಹಾಗು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಅವಿರೋಧವಾಗಿ ನಡೆಯಿತು.
ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಿ.ಆರ್. ಹೆಗಡೆ ಬೆಳ್ಳೆಕೇರಿ, ಉಪಾಧ್ಯಕ್ಷರಾಗಿ ಪಿ.ವಿ. ಹೆಗಡೆ ಹೆಗಡೆಕಟ್ಟಾ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀರಾಮ ನಾಯ್ಕ ಕೊರ್ಲಕಟ್ಟಾ, ಖಜಾಂಚಿಯಾಗಿ ನರಸಿಂಹ ಹೆಗಡೆ ಬಕ್ಕಳ, ಜಿಲ್ಲಾ ಪ್ರತಿನಿಧಿಯಾಗಿ ಆರ್.ಡಿ.ಹೆಗಡೆ ಜಾನ್ಮನೆ ಆಯ್ಕೆಯಾಗಿದ್ದಾರೆ.