ಶಿರಸಿ :ಬೆಂಗಳೂರಿನ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜುಲೈ 12, ಶನಿವಾರ ವಿವಿಧ ಪ್ರಶಸ್ತಿ ಪುರಸ್ಕೃತ ಕುಮಾರಿ ತುಳಿಸಿ ಹೆಗಡೆ ಇವಳ ವಿಶ್ವಾಭಿಗಮನಮ್ ಯಕ್ಷನೃತ್ಯ ನಡೆಯಲಿದೆ. ಇದಕ್ಕೆ ಸಾಹಿತ್ಯ ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಹಾಗೂ ನಿರ್ದೇಶನ ವಿ. ಉಮಾಕಾಂತ ಕೆರೆಕೈ ಅವರದ್ದಾಗಿದೆ.
ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರ ದಶರೂಪಕಗಳ ದಶಾವತಾರ ಪುಸ್ತಕದ ಹಿನ್ನೆಲೆಯಲ್ಲಿ ಯಕ್ಷಗಾನ ಶಾಸ್ತ್ರೀಯವೇ! ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂವಾದದಲ್ಲಿ ಅಶೋಕ ಹಾಸ್ಯಗಾರ, ಯಕ್ಷಗಾನ ವಿದ್ವಾಂಸ ಡಾ.ಆನಂದರಾಮ ಉಪಾಧ್ಯ, ಯಕ್ಣಗಾನ ಕಲಾವಿದ ಹಾಗೂ ಸಾಹಿತಿ ರವಿ ಮಡೋಡಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಹಿತಿ ದಿನೇಶ ಉಪ್ಪೂರು ಅವರನ್ನು ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಅಂಕಣಕಾರ ರಾಜು ಅಡಕಳ್ಳಿ,, ಯಕ್ಷಗಾನ ಅರ್ಥಧಾರಿ ಜಿ.ಮೃತ್ಯುಂಜಯ ಅವರುಗಳು ಉಪಸ್ಥಿತರಿರಲಿದ್ದಾರೆ. ಸರ್ವರಿಗೂ ಸ್ವಾಗತ ಎಂದು ಹೆಸ್ಕಾಮ್ ನಿವೃತ್ತ ಲೆಕ್ಕಾಧಿಕಾರಿ ಆರ್.ಜಿ.ದೇಶಪಾಂಡೆ ತಿಳಿಸಿದ್ದಾರೆ.