Slide
Slide
Slide
previous arrow
next arrow

ಸುಮಾ ಗಡಿಗೆಹೊಳೆಗೆ ‘ಹವ್ಯಕ ಸ್ಪೂರ್ತಿರತ್ನ’ ಪ್ರಶಸ್ತಿ

300x250 AD

ಶಿರಸಿ: ಯಕ್ಷಗಾನ ಕಲಾವಿದೆ, ಯಕ್ಷಗುರು ಸುಮಾ ಗಡಿಗೆಹೊಳೆ ಶ್ರೀ ಅಖಿಲ ಹವ್ಯಕ ಮಹಾಸಭಾ ನೀಡುವ ‘ಹವ್ಯಕ ಸ್ಪೂರ್ತಿರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಮೂರನೇ ದಿನವಾದ ಡಿ.೨೯ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಸಕ್ತ ಸುಮಾ ಗಡಿಗೆಹೊಳೆ ಯಕ್ಷ ಕಲಾ ಸಂಗಮ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ. ಅಮೇರಿಕದಲ್ಲಿಯೂ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿದ್ದಾರೆ. ಅವರ ಈ ಸಾಧನೆ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top