ಸಿದ್ದಾಪುರ: ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಿದ್ದಾಪುರ ಇವುಗಳ ನೇತೃತ್ವದಲ್ಲಿ ಶನಿವಾರ ವಿಶ್ವ ಧ್ಯಾನ ದಿನಾಚರಣೆ ಆಚರಿಸಲಾಯಿತು. ರಾಯಪ್ಪ ಶಿರನಾಳ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪ್ರಭಾರಿ ಮಂಜುನಾಥ ನಾಯ್ಕ ಮಹಿಳಾ ಪ್ರಭಾರಿ ವೀಣಾ ಶೇಟ್ ಇತರರಿದ್ದರು.