ದಾಂಡೇಲಿ : ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಡಿ ಮತ್ತು ಅಯ್ಯಪ್ಪ ಭಕ್ತ ವೃಂದದ ಸಹಕಾರದಲ್ಲಿ ಕುಳಗಿ ರಸ್ತೆಯಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ಮಂದಿರದಿಂದ ಭವ್ಯ ಶೋಭಾ ಯಾತ್ರೆಗೆ ಭಾನುವಾರ ಸಂಜೆ ಚಾಲನೆಯನ್ನು ನೀಡಲಾಯಿತು.
ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಿಂದ ಆರಂಭಗೊಂಡ ಶೋಭಾ ಯಾತ್ರೆಯು ನಗರದ ಕುಳಗಿ ರಸ್ತೆ, ಕೆ.ಸಿ ವೃತ್ತ, ಜೆ.ಎನ್ ರಸ್ತೆ ಮಾರ್ಗವಾಗಿ ಸೋಮಾನಿ ವೃತ್ತದ ಮೂಲಕ ಸಾಗಿ ಕೊನೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ಮಹಿಳೆಯರು ದೀಪದ ಆರತಿಯೊಂದಿಗೆ ಸರತಿಯ ಸಾಲಿನಲ್ಲಿ ಬಂದು ಮೆರವಣಿಗೆಗೆ ಶೋಭೆಯನ್ನು ತಂದು ಕೊಟ್ಟರು. ಕೇರಳದ ಚೆಂಡೆ ಕಲಾ ತಂಡ ಶೋಭಾಯಾತ್ರೆಗೆ ವಿಶೇಷ ಮೆರುಗನ್ನು ತಂದುಕೊಟ್ಟಿತು.
ಶೋಭಾಯಾತ್ರೆಯಲ್ಲಿ ಶ್ರೀಅಯ್ಯಪ್ಪ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀಅಯ್ಯಪ್ಪ ಮಾಲಾಧಾರಿಗಳು, ಅಂಬಾರಿ ಕ್ವೀನ್ಸ್ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.