ಶಿರಸಿ: Access Livelihoods ಮತ್ತು Niti ಆಯೋಗ ಜಂಟಿಯಾಗಿ ಪ್ರತಿವರ್ಷ “FPO of the Year 2024” ಪ್ರಶಸ್ತಿ ನೀಡುತ್ತಿದ್ದು,ಈ ಬಾರಿ ತಾಲೂಕಿನ ಪ್ರಗತಿಮಿತ್ರ ರೈತ ಉತ್ಪಾದಕ ಕಂಪನಿಯು ಪ್ರಶಸ್ತಿಯನ್ನು ಪಡೆದುಕೊಂಡಿದೆ.ನವದೆಹಲಿಯ ಲೀಮೆರಿಡಿಯನ್ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಮೆಡಲ್, ಸರ್ಟಿಫಿಕೇಟ್ ಹಾಗೂ ರೂ.75,000/- ನಗದು ಬಹುಮಾನ ಹೊಂದಿದೆ. ಪ್ರಗತಿಮಿತ್ರದ ರೈತಪರ ಕಾಳಜಿ, ಅಡಿಕೆ ಮತ್ತು ಕಾಳುಮೆಣಸಿನ ಕೊಯೊತ್ತರ ನಿರ್ವಹಣೆ(Collective Processing Centre), ಮೌಲ್ಯವರ್ಧನೆ, ತೋಟ ನಿರ್ವಹಣೆಗೆ ಯಂತ್ರೋಪಕರಣಗಳ ಸೇವೆ, ಮಾರ್ಕೆಟಿಂಗ್, ಪರಿಕರಗಳ ವಿತರಣೆ, ಹಾಗೂ ಕಂಪನಿಯ ಸಮಗ್ರ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ದೆಹಲಿಯಲ್ಲಿ ನಡೆದ 2 ದಿನಗಳ Livelihood Summitನಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಪ್ರಗತಿಮಿತ್ರದ ಮ್ಯಾನೇಜಿಂಗ್ ಡೈರೆಕ್ಟರ್ ವಿವೇಕ್ ಹೆಗಡೆ,ಪ್ರವರ್ತಕ ಸಂಸ್ಥೆಯ ನಿರ್ದೇಶಕರಾದ ಗಣಪತಿ ಭಟ್ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಿಬ್ಬಂದಿಗಳಾದ ಪ್ರಜ್ವಲ್ ಹೆಗಡೆ ಮತ್ತು ವಿನಯ ಗೋಪಾಲ್ ನಾಯ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿಮಿತ್ರದ ಈ ಸಾಧನೆಗೆ ಕಂಪನಿಯ ಸದಸ್ಯರು, ಆಡಳಿತ ಮಂಡಳಿ, ಸಿಬ್ಬಂದಿಗಳು ಹಾಗೂ ಸಹಕಾರ ನೀಡಿದ NABARD, MANUVIKASA, NABKISAN, Bank Of Baroda, Agriculture Dept. ರವರಿಗೆ ವಿವೇಕ ಹೆಗಡೆ ಕೃತಜ್ಞತೆ ತಿಳಿಸಿದರು. ದೇಶದ ಒಂದು ಮೂಲೆಯಲ್ಲಿ ನಡೆಯುತ್ತಿರುವ ರೈತಪರ ಕೆಲಸವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದಕ್ಕಾಗಿ Access Livelihoods ಮತ್ತು Niti ಆಯೋಗಕ್ಕೆ ಧನ್ಯವಾದ ತಿಳಿಸಿದರು. ಈ ಪ್ರಶಸ್ತಿಗೆ Ananya Finance, Rabo Foundation, Master Card ಮತ್ತು Women World Bankನ ಪ್ರಾಯೋಜಕತ್ವ ಇರುತ್ತದೆ.