ಶಿರಸಿ: ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತನ ಗಿಡಮಾವಿನಕಟ್ಟೆಯಲ್ಲಿ “ರೋಜಗಾರ್ ದಿನ” ಆಚರಿಸಿ, 2025-26ನೇ ಸಾಲಿನಲ್ಲಿ ನರೇಗಾ ಕ್ರಿಯಾ ಯೋಜನೆಗೆ ಕಾಮಗಾರಿ ಮಾಹಿತಿ ನೀಡಿ ಸಾರ್ವಜನಿಕರು ಬೇಡಿಕೆಗಳನ್ನು ಪಂಚಾಯತಿಗೆ ಸಲ್ಲಿಸುವಂತೆ ಅರಿವು ಮೂಡಿಸಲಾಯಿತು.
ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ಕಾಮಗಾರಿ ವಿವರ ಹಾಗೂ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಾರಾಮ್ ಭಟ್ ಹಾಗೂ ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ ನೀಡಿದರು.
ಉದ್ಯೋಗ ಖಾತ್ರಿಯಡಿ ಗಂಡು ಹೆಣ್ಣಿಗೆ ದಿನಕ್ಕೆ 349ರೂ ಕೂಲಿ, ವರ್ಷದಲ್ಲಿ ಕುಟುಂಬವೊAದಕ್ಕೆ 100ದಿನಗಳ ಕೆಲಸ, ಕೆಲಸದ ಪ್ರಮಾಣ ಹಾಗೂ ಅವಧಿ, 65 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೆಲಸದಲ್ಲಿ ರಿಯಾಯತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿಶೇಡ್, ಕೋಳಿಶೇಡ್, ಬದು ನಿರ್ಮಾಣ ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಸಿಬೆ, ಹಿಪ್ಪು ನೇರಳೆ, ಕಾಳು ಮೆಣಸು ಹಾಗೂ ಇನ್ನಿತರೆ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂಬುದರ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಬಿಎಫ್ ಟಿ ಪ್ರಸನ್ನ ಹೆಗಡೆ, ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.