Slide
Slide
Slide
previous arrow
next arrow

ಡಿ.22ಕ್ಕೆ ಯೋಗಪಟು ವಿನಾಯಕ್ ಯಲ್ಲಾಪುರಕ್ಕೆ

300x250 AD

ಯಲ್ಲಾಪುರ : ಯೋಗಪಟು ಹುಬ್ಬಳ್ಳಿಯ ವಿನಾಯಕ ಕೊಂಗಿ ಯಲ್ಲಾಪುರದ ಯೋಗಾಸನ ಸ್ಪರ್ಧಾಸಕ್ತರಿಗೆ ತರಬೇತಿ ನೀಡಲು ಡಿ.೨೨ ರಂದು ಭಾನುವಾರ ೩ ಗಂಟೆಗೆ ಪಟ್ಟಣದ ವೆಂಕಟ್ರಮಣ ಮಠಕ್ಕೆ ಆಗಮಿಸಲಿದ್ದಾರೆ. ಈವರೆಗೆ ತಮ್ಮ ಸಾಧನೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದ ೬೧ ಚಿನ್ನ, ೧೬ ಬೆಳ್ಳಿ, ೧೭ ಕಂಚು ಸೇರಿದಂತೆ ೯೪ ಪದಕಗಳನ್ನು ಗಳಿಸಿದ ಮಹಾನ್ ಸಾಧಕರನ್ನು ತಾವು ಅಂದು ಕಾಣಬಹುದಾಗಿದೆ.

ಇವರು, ಜಿಲ್ಲಾ, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪಡೆದ ಇವರಿಗೆ ೨೦೨೪ ರಲ್ಲಿ ರಾಷ್ಟ್ರೀಯ ಯೋಗಭಾರತಿ ಪ್ರಶಸ್ತಿ ನೀಡಿ, ಗೌರವಿಸಿದೆ. ಅಲ್ಲದೇ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಪಡೆದಂತಹ ಇವರು ಯಲ್ಲಾಪುರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ವಯಸ್ಸಿಗರಿಗೂ ಯೋಗ ಸ್ಪರ್ಧೆಯ ತರಬೇತಿಯನ್ನು ನೀಡಲಿದ್ದಾರೆ. ಹಾಗಾಗಿ ೨.೩೦ ಸರಿಯಾಗಿ ವೆಂಕಟ್ರಮಣ ಮಠಕ್ಕೆ ಬಂದು ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಯನ್ನು ಆಸಕ್ತರಿಗೂ ತಿಳಿಸಿ ಎಂದು ಯಲ್ಲಾಪುರ ತಾಲೂಕಾ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಕಾರ್ಯದರ್ಶಿ ಸುಬ್ರಾಯ ಭಟ್ಟ ಆನೆಜಡ್ಡಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top