ದಾಂಡೇಲಿ : ನಗರದ ವಿವಿಧೆಡೆಗಳಲ್ಲಿ ಆತಂಕಕಾರಿ ಮರಗಳ ಟೊಂಗೆಗಳ ತೆರವಿಗೆ ನಗರಸಭೆ ಮತ್ತೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಗುರುವಾರ ಸುಭಾಷ ನಗರದ ರಸ್ತೆ ಬದಿಯಲ್ಲಿದ್ದ ಆತಂಕಕಾರಿ ಮರಗಳ ಟೊಂಗೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.
ಸ್ಥಳದಲ್ಲಿ ಉಪಸ್ಥಿತರಿದ್ದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ನಗರದ ವಿವಿಧೆಡೆಗಳಲ್ಲಿರುವ ಆತಂಕಕಾರಿ ಮರಗಳ ಟೊಂಗೆಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.