ಯಲ್ಲಾಪುರ: ಯಲ್ಲಾಪುರ ತಾಲ್ಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಬುಧವಾರ ಜರುಗಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ನಿರ್ದೇಶನದಂತೆ ಡಿಸೆಂಬರ್ 12 ರಂದು ತಾಲ್ಲೂಕಿನಾದ್ಯಂತ ಹಮ್ಮಿಕೊಂಡ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಶೇ 100ರಷ್ಟು ತೆರಿಗೆ ಸಂಗ್ರಹಿಸಿದ ಹಿತ್ಲಳ್ಳಿ, ಆನಗೋಡ ಮತ್ತು ಒಂದು ಲಕ್ಷಕ್ಕಿಂತ ಹೆಚ್ಚು ತೆರೆಗೆ ಸಂಗ್ರಹಿಸಿ ಉತ್ತಮ ಪ್ರಗತಿ ಸಾಧಿಸಿದ ಕಣ್ಣಿಗೇರಿ, ಕಿರವತ್ತಿ, ಮಂಚಿಕೇರಿ, ಮದನೂರ, ಇಡಗುಂದಿ, ಮಾವಿನಮನೆ, ಹಾಸಣಗಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು, ಸಿಬ್ಬಂದಿಗೆ ಹಾಗೂ ಜಿಲ್ಲಾ ಪಂಚಾಯತ್‌ನಿಂದ ನೀಡುವ ಜಿಲ್ಲಾ ಮಟ್ಟದ ನವೆಂಬರ್ ತಿಂಗಳ “ಪಿಡಿಒ ಆಪ್ ದಿ ಮಂತ್” ಪ್ರಶಸ್ತಿ ಪುರಸ್ಕೃತ ಕುಂದರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರವಿ ಪಟಗಾರಗೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ತಾಲ್ಲೂಕಾ ಯೋಜನಾಧಿಕಾರಿ ರಾಘವ ಸ್ಮರಣಿಕೆ, ಪ್ರಮಾಣ ಪತ್ರ ವಿತರಿಸುವ ಮೂಲಕ ಸನ್ಮಾನಿಸಿ ಅಭಿನಂದಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸ ಒದಗಿಸುವ ಮೂಲಕ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯತಿಗಳು ವಾರ್ಷಿಕ ನಿಗದಿತ ಗುರಿ ಸಾಧಿಸಬೇಕು. 2025-26 ನೇ ಸಾಲಿನ ಕ್ರೀಯಾ ಯೋಜನೆ ತಯಾರಿಕೆಗಾಗಿ ಆನ್‌ಲೈನ್‌ನಲ್ಲಿ ಕಾಮಗಾರಿಗಳನ್ನ ಸೇರಿಸುವ ಪ್ರಕ್ರಿಯೆ ಮುಂದಿನ 2-3 ದಿನಗಳಲ್ಲಿ ಅಂತ್ಯವಾಗುವ ಸಾಧ್ಯತೆಯಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಾಗಿನ್‌ನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಹೆಸರು ನೊಂದಾಸಿಕೊಳ್ಳಬೇಕು. ಕಾಮಗಾರಿ ಮುಕ್ತಾಯ, ಜಿಯೋ ಟ್ಯಾಗಿಂಗ್, ಎನ್‌ಎಮ್‌ಮ್‌ಎಸ್ ಹಾಜರಾತಿ, ಫ್ರೀ ಮೇಜರ್‌ಮೆಂಟ್ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸಬೇಕು ಎಂದರು.
ವಸತಿ ಯೋಜನೆಯಡಿ ವಸತಿ ಕಾಮಗಾರಿಗಳ ಮುಕ್ತಾಯ, ಹಂತಹಂತದ ಜಿಯೋ ಟ್ಯಾಗಿಂಗ್ ಪ್ರಕ್ರಿಯೆ, ಎಸ್‌ಬಿಎಂ ಯೋಜನೆಯಡಿ ಕಾರ್ಯನಿರ್ವಹಿಸುವ ಕಸ ವಿಲೇವಾರಿ ಘಟಕಗಳ, ಕಸ ಸಂಗ್ರಹಣೆ ವಾಹನ ಕಾರ್ಯನಿರ್ವಹಣೆ, ಜೆಜೆಎಂ ಯೋಜನೆಯಡಿ ನಳ, ನೀರಿನ ಮೂಲಗಳ ಸಂಪರ್ಕ ಹಾಗೂ ಗ್ರಾಮ ಪಂಚಾಯತಿಗಳಿಗೆ ಹಸ್ತಾಂತರ ಪ್ರಕ್ರಿಯೆ, ಗ್ರಂಥಾಲಯಗಳ ಕಾರ್ಯ, ಗ್ರಾಮ ಪಂಚಾಯತಿಗಳ ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ಪ್ರಕ್ರಿಯೆ ಸೇರಿದಂತೆ ವಿವಿಧ ಸುಧಾರಿತ ವ್ಯವಸ್ಥೆಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ರಾಮದಾಸ ನಾಯ್ಕ್, ವಿಷಯ ನಿರ್ವಾಹಕ ಪರಶುರಾಮ ಹುಲಗೂರ, ಗಣಪತಿ ಭಾಗ್ವತ ಎಲ್ಲ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಡಿಇಒ ಗಳು, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.