ಕಾರವಾರ: ಕಾರವಾರ ಅಂಚೆ ವಿಭಾಗದ ಪ್ರಸಕ್ತ ಸಾಲಿನ 4 ನೇ ತ್ರೈಮಾಸಿಕ ಅಂಚೆ ಅದಾಲತ್‌ನ್ನು ಅಂಚೆ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಡಿ.31 ರಂದು ಮಧ್ಯಾಹ್ನ 3 ಗಂಟೆಗೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿದೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ತಾಲೂಕುಗಳ ವ್ಯಾಪ್ತಿಯಲ್ಲಿರುವ ಅಂಚೆ ಸೇವೆಗಳಿಗೆ ಸಂಬಂಧ ಪಟ್ಟ ಸಲಹೆ, ಸೂಚನೆ ಮತ್ತು ಅದಾಲತ್‌ನಲ್ಲಿ ವಿಚಾರಣೆಗೆ ಎಂದು ಮೇಲ್ಬರಹ ಬರೆದು ಯಾವುದೇ ಅಂಚೆ ಕಚೇರಿಗೆ ರವಾನೆಗಾಗಿ ಸಲ್ಲಿಸಬಹುದು. ಇಂತಹ ಲಕೋಟಿಗೆ ಅಂಚೆ ವೆಚ್ಚ ಭರಿಸುವ ಅಗತ್ಯವಿರುವುದಿಲ್ಲ. ದೂರು ಮತ್ತು ಸಲಹೆಗಳನ್ನು ಅಂಚೆ ಅಧೀಕ್ಷಕರು, ಕಾರವಾರ ವಿಭಾಗ ಕಾರವಾರ ಇವರ ಕಾರ್ಯಾಲಯಕ್ಕೆ ಡಿ.30 ರೊಳಗಾಗಿ ತಲುಪುವಂತೆ ಕಳುಹಿಸಬೇಕು.
ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಸಾಮಾನ್ಯ ಮಟ್ಟದ ಅಂದರೆ ಈ ವಿಭಾಗದ ಅಂಚೆ ಕಚೇರಿಗಳಿಂದ ಈಗ ಕೊಡುತ್ತಿರುವ ಸೇವೆಗಳಲ್ಲಿ ಇರುವ ಕೊರತೆಗಳನ್ನು ಮತ್ತು ಅವುಗಳನ್ನು ಸುಧಾರಿಸುವ ಸಲಹೆ ಸೂಚನೆಗಳನ್ನು ಚರ್ಚಿಸಲಾಗುವುದು. ಇಲಾಖೆಯ ಕಾರ್ಯನೀತಿ ಧೋರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಈ ವಿಭಾಗೀಯ ಅಂಚೆ ಅದಾಲತ್‌ನಲ್ಲಿ ಚರ್ಚಿಸಲಾಗುವುದಿಲ್ಲ. ಇಂತಹ ಕಾರ್ಯ ನೀತಿ ಧೋರಣೆಯ ಬಗ್ಗೆ ಸಲಹೆ ಸೂಚನೆಗಳನ್ನು ಬೇರೆ ಯಾವುದೇ ಸಮಯದಲ್ಲಿ ಬರೆದು ತಿಳಿಸಿದ್ದಲ್ಲಿ, ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುವುದು ಎಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.