ಹೊನ್ನಾವರ: ಜೆ.ಎಸ್.ಎಸ್. ಕಾಲೇಜು, ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ೭೧ನೇ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುರೇಶ ಶ್ರೀಧರ ಗೌಡ ೪೦೦ ಮೀ ಹರ್ಡಲ್ಸ್ ನಾಲ್ಕನೇ ಸ್ಥಾನ, ರಕ್ಷಿತಾ ಗಾಬಿತ್, ಗುಂಡು ಎಸೆತದಲ್ಲಿ ನಾಲ್ಕನೇ ಸ್ಥಾನ, ದಿನೇಶ ಗೌಡ, ಎತ್ತರ ಜಿಗಿತದಲ್ಲಿ ನಾಲ್ಕನೇ ಸ್ಥಾನ, ತೇಜಸ್ವಿನಿ ನಾಗೇಶ ಗೌಡ ಪೋಲ್ವಾಲ್ಟ್ನಲ್ಲಿ ನಾಲ್ಕನೇ ಸ್ಥಾನ, ಅರುಣ ಗಣಪತಿ ಗೌಡ ಎತ್ತರ ಜಿಗಿತದಲ್ಲಿ ಕಂಚಿನ ಪದಕ, ದಿನೇಶ್ ನಾಯ್ಕ ತ್ರಿವಿಧ ಜಿಗಿತದಲ್ಲಿ ಕಂಚಿನ ಪದಕ, ಸಹನಾ ದಾಸ ಖಾರ್ವಿ ೧೦೦ ಮೀ ಹರ್ಡಲ್ಸ್ನಲ್ಲಿ ನಾಲ್ಕನೇ ಸ್ಥಾನ, ನಾಗರಾಜ ಕುಪ್ಪು ಗೌಡ ೪೦೦ ಮೀ ಓಟದಲ್ಲಿ ನಾಲ್ಕನೇ ಸ್ಥಾನ, ಸುದೀಪ ಹೊನ್ನೇಕಾಯಿ ಹ್ಯಾಮರ್ ಥ್ರೋದಲ್ಲಿ ಬೆಳ್ಳಿ ಪದಕ, ಚಿನ್ಮಯ್ ಮರಾಠಿ ೧೦೦ ಮೀ ಕಂಚಿನ ಪದಕ, ೨೦೦ ಮೀ ಬೆಳ್ಳಿ ಪದಕ, ರಾಹುಲ್ ಐಗಳ್, ಪೋಲ್ವಾಲ್ಟ್ನಲ್ಲಿ ಬೆಳ್ಳಿ, ಡೆಕತ್ಲಾನ್ನಲ್ಲಿ ಬೆಳ್ಳಿ, ಈಶ್ವರ ನಾರಾಯಣ ಗೌಡ, ತ್ರಿವಿಧ ಜಿಗಿತದಲ್ಲಿ ಬೆಳ್ಳಿ, ೧೦೦ ಮೀ ಹರ್ಡಲ್ಸ್ನಲ್ಲಿ ಚಿನ್ನ, ೪ಘಿ೧೦೦ ಮೀ ರೀಲೆ ನಲ್ಲಿ ಬೆಳ್ಳಿ, ನಿಖಿತಾ ಗೌಡ ಹೆಪ್ಟಾತ್ಲಾನ್ ಚಿನ್ನ, ಎತ್ತರ ಜಿಗಿತ ಚಿನ್ನ, ರೀಲೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಒಟ್ಟೂ ೩ ಚಿನ್ನ, ೫ ಬೆಳ್ಳಿ, ೫ ಕಂಚಿನ ಪದಕಗಳನ್ನು ಗಳಿಸಿ ವಿಶ್ವವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ತೃತೀಯ ಸ್ಥಾನ ಹಾಗೂ ಪುರುಷರ ವಿಭಾಗದಲ್ಲಿ ಮೊದಲ ರನ್ ರ್ಸಆಗಿ ಹೊರಹೊಮ್ಮಿರುತ್ತಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಉಪನ್ಯಾಸಕರು ಅಭಿನಂದಿಸಿದ್ದಾರೆ.