ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ವತಿಯಿಂದ ಡಿ.18 ರಂದು ಮಧ್ಯಾಹ್ನ 4.30 ರಿಂದ ಸಂಜೆ 7.30 ರವರೆಗೆ ನಾದಪೂಜೆ ಎಂಬ ಸಂಗೀತ ಕಾರ್ಯಕ್ರಮವು ನಗರದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ. ಗಾಯನದಲ್ಲಿ ಶ್ರೀಧರ ಹೆಗಡೆ ದಾಸನಕೊಪ್ಪ, ರವೀಂದ್ರ ಹೆಗಡೆ, ಬೆಂಗಳೂರು (ಇಳಿಮನೆ) ತಬಲಾ ಮಹೇಶ್ ಹೆಗಡೆ ಹೊಸಗದ್ದೆ ಮತ್ತು ನಿತಿನ ಹೆಗಡೆ ಕಲಗದ್ದೆ, ಸಂವಾದಿನಿಯಲ್ಲಿ ಅಜಯ ಹೆಗಡೆ ವರ್ಗಾಸರ ನಡೆಸಿಕೊಡಲಿದ್ದಾರೆ. ಸೌಂಡ್ಸ್, ಶ್ರೀ ಸೌಂಡ್ಸ್ ಹೆಗ್ಗರಣಿ ಇವರು ನಿರ್ವಹಿಸಲಿದ್ದಾರೆ. ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಹಾಗೂ ಕಾಯಕ್ರಮಕ್ಕೆ ಸಹಕರಿಸಿದ ಅಧ್ಯಕ್ಷರು, ಹಾಗೂ ಆಡಳಿತ ಮಂಡಳಿ, ಶ್ರೀ ಮಹಾಗಣಪತಿ ದೇವಸ್ಥಾನ, ಶಿರಸಿ ಇವರು ಸಂಗೀತಾಭಿಮಾನಿಗಳಿಗೆ ಮತ್ತು ಸರ್ವರಿಗೂ ಆದರದ ಸ್ವಾಗತ ಕೋರಿರುತ್ತಾರೆ.