Slide
Slide
Slide
previous arrow
next arrow

ಜನತೆಯನ್ನು ಭಯಕ್ಕೀಡು ಮಾಡಿದ ಜೇನುಗೂಡು: ತೆರವಿಗೆ ಆಗ್ರಹ

300x250 AD

ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯ ಬದಿಯ ಮರವೊಂದಕ್ಕೆ ಜೇನುಗೂಡು ಕಟ್ಟಿಕೊಂಡಿದ್ದು ಯಾವಾಗ ಜೇನುನೊಣಗಳ ದಾಳಿಗೆ ಒಳಗಾಗುವರೋ ಎಂಬ ಆತಂಕ ಭಯದಲ್ಲಿ ಸಾರ್ವಜನಿಕರು ಓಡಾಡುವಂತಾಗಿದೆ.

ಶಾಲೆಗೆ ಹೋಗುವ ಪುಟ್ಟ ಮಕ್ಕಳ ಮೇಲೆ ದಾಳಿ ಮಾಡದಿದ್ದರೆ ಸಾಕು, ಬಿಸಿಲಿನ ತಾಪಮಾನಕ್ಕೆ ಜೇನುಗೂಡಿನಿಂದ ಜೇನುನೊಣಗಳು ಹೋರಬರುವ ಸಾಧ್ಯತೆ ಹೆಚ್ಚಾಗಿದ್ದು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗಲಾರಂಭಿಸಿದೆ. ಜೇನುಗೂಡು ತೆರವುಗೊಳ್ಳಿಸಲು ಅರಣ್ಯ ಇಲಾಖಾ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಅದನ್ನು ತೆರವುಗೊಳ್ಳಿಸಲು ಮೀನಾಮೇಷ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳ ಮೇಲೆ ದಾಳಿ ಮಾಡಿದ ಮೇಲೆ ಜೇನುಗೂಡು ತೆರವು ಮಾಡುತ್ತಾರಾ ನೋಡಬೇಕು. ಅವಘಡ ಸಂಭವಿಸಿದರೆ ಅರಣ್ಯ ಇಲಾಖೆಯವರೆ ಹೊಣೆಗಾರರು ಎಂದು ಸ್ಥಳೀಯರು ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top