ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ಎಂಬ ಗಿರಿಜನ ಊರಿನಲ್ಲಿ ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಜೊತೆ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ ಭೇಟಿ ನೀಡಿದರು.
ಈ ವೇಳೆ ಸ್ವಾಮಿಜಿಯವರು ಆಶೀರ್ವಚನ ಮತ್ತು ವನವಾಸಿಗಳಿಗೆ ಕೆಲವು ಅಗತ್ಯ ಮೂಲಭೂತ ಸೌಕರ್ಯಗಳ ಮಠದಿಂದ ಒದಗಿಸುವ ಬಗ್ಗೆ ಭರವಸೆ ನೀಡಿದರು. ಶಾಂತಾರಾಮ ಸಿದ್ದಿ ವಿಧಾನ ಪರಿಷತ್ ಸದಸ್ಯರಿಂದ ಸರ್ಕಾರದ ಅನೇಕ ಸೌಲಭ್ಯಗಳ ಕೊಡಿಸುವ ಭರವಸೆ ಮತ್ತು ಗಿರಿಜನರಿಗೆ ಇರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದರು.
ಸ್ವಾಮಿಜಿಯವರು ಪಾದಯಾತ್ರೆ ವೇಳೆ, ಗಿರಿಜನ ಬಂಧುಗಳು ಪಾದಪೂಜೆ ಮಾಡಿ, ಭಜನೆ, ಪೂರ್ಣಕುಂಭ ಸ್ವಾಗತ ನೆರವೇರಿಸಿದರು.
ವೇದಿಕೆಯಲ್ಲಿ ಗಿರಿಜನರ ಮುಖಂಡರಾದ ಚಂದ್ರಪ್ಪ ಜಿಲ್ಲಾ ಐಟಿಡಿಪಿ ಅಧಿಕಾರಿ ಶ್ರೀಮತಿ ಭಾಗಿರತಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸುದೀಪ್, ಬುಡಕಟ್ಟು ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಇವರೆಲ್ಲ ಭಾಗಿ ಶೃಂಗೇರಿಯ ಶ್ರೀ ಮಠದಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.