ಶಿರಸಿ: ಹೊನ್ನಾವರದಲ್ಲಿ ವಿಭಾಗ ಮಟ್ಟದ ಥ್ರೋ ಬಾಲ್ ಫ್ಲಡ್ ಲೈಟ್ ಪಂದ್ಯ ನಡೆದಿದ್ದು, 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಶಿರಸಿ ತಂಡದ ಪರವಾಗಿ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು ಥ್ರೋ ಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. 17ವರ್ಷಗಳ ಹಿಂದೆ ಬಾಲಕಿಯರ ತಂಡದೊಂದಿಗೆ ಸಾಧನೆ ಮಾಡಿತ್ತು. ಈ ವರ್ಷದಲ್ಲಿ ಬಾಲಕರ ತಂಡವು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಮುಂದಿನ ದಿನಗಳಲ್ಲಿ ಕೋಲಾರದ ಕಿಲ್ಲರ್ನಿಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಭಾಗವಹಿಸಲಿದ್ದಾರೆ. ಶಾಲಾ ಮುಖ್ಯಾಧ್ಯಾಪಕರು, ಆಡಳಿತಮಂಡಳಿ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶುಭಹಾರೈಸಿದ್ದಾರೆ.