Slide
Slide
Slide
previous arrow
next arrow

ಲಂಚ ಪಡೆದ ಅರಣ್ಯ ರಕ್ಷಕನಿಗೆ ಶಿಕ್ಷೆ ಪ್ರಕಟ

300x250 AD

ಕಾರವಾರ: ಬಾವಿ ತೋಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವುದಾಗಿ ತಿಳಿಸಿ ರೂ.10,000 ಲಂಚಕ್ಕೆ ಬೇಟಿಕೆ ಇಟ್ಟ ಅರಣ್ಯ ರಕ್ಷಕನಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ರ ಕಲಂ 7, ರಡಿ 1 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 5000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾವಾಸ ಶಿಕ್ಷೆ. ಕಲಂ13(1)(ಡಿ)ಸಹಿತ 13(2) ರಡಿಯಲ್ಲಿ 2 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ರೂ 5,000 ದಂಡ ವಿಧಿಸಿ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳ ಕಾರಾವಾಸ ಶಿಕ್ಷೆ ವಿಧಿಸಿ, ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ವಿಜಯ ಕುಮಾರ್ ತೀರ್ಪು ನೀಡಿದ್ದಾರೆ.

ಪ್ರಕರಣ ಹಿನ್ನಲೆ: ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮದ ಕೊರ್ಸೆಯ ಮರಾಠಿಕೇರಿ ನಿವಾಸಿ ಕೃಷ್ಣ ರಾಮ ಮರಾಠಿ ಇವರು ಶಿವಳ್ಳಿ ಗ್ರಾಮದ ಅರಣ್ಯ ಇಲಾಖೆಯ ಸರ್ವೇ ನಂ: 123 ರಲ್ಲಿ ಬಾವಿ ತೋಡಲು ಪ್ರಾರಂಭಿಸಿದ್ದು, ಇದರ ಬಗ್ಗೆ ಮಾಹಿತಿ ಆದರಿಸಿ ವಿಚಾರಿಸಲು ಬಂದ ಅರಣ್ಯ ರಕ್ಷಕ ಗುರುಶಾಂತ ಶಿವಪ್ಪ ಸಂಕಣ್ಣನವರ್ ಕೃಷ್ಣ ರಾಮ ಮರಾಠಿ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸುವುದಾಗಿ ಹೇಳಿ ಸಾಯಂಕಾಲ ಎಕ್ಕಂಬಿ ಹತ್ತಿರ ಇರುವ ಶಿವಳ್ಳಿ ಅರಣ್ಯ ವಸತಿ ಗೃಹಕ್ಕೆ ಬಂದು ಭೇಟಿಯಾಗಲು ಹೇಳಿದ್ದು, ಅದರಂತೆ ವಸತಿ ಗೃಹಕ್ಕೆ ಹೋಗಿ ವಿಚಾರಿಸಿದಾಗ ಬಾವಿ ತೋಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವುದಾಗಿ ತಿಳಿಸಿ ರೂ 10,000 ಲಂಚದ ಹಣಕ್ಕೆ ಬೇಡಿಕೆ ಇಟ್ಟು ನಂತರದಲ್ಲಿ ರೂ.5000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ರೂ. 4000 ಲಂಚ ಪಡೆಯುವಾಗ ಟ್ರಾಪ್ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ನೌಕರರ ವಿರುದ್ದ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ, ಉತ್ತರ ಕನ್ನಡದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆಸಲಾಗಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮಿಕಾಂತ ಎಮ್ ಪ್ರಭು ವಾದ ಮಂಡಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top