ಭಟ್ಕಳ: ಆಟವಾಡುತ್ತಿದ್ದ ವೇಳೆ ಬಿದ್ದು ತನ್ನ ತನ್ನ ಬಲಗೈ ಮುರಿದುಕೊಂಡ ನಾಲ್ಕು ವರ್ಷದ ಮಗುವಿನ ಚಿಕಿತ್ಸೆಯ ಪೂರ್ತಿ ಹಣವನ್ನು ಉದ್ಯಮಿ ಮಾಸ್ತಪ್ಪ ನಾಯ್ಕ ನೀಡುವ ಮೂಲಕ ಬಡವರ ಮೇಲಿನ ಕಾಳಜಿ ಮತ್ತು ಪ್ರೀತಿಯನ್ನು ತೋರಿಸಿದ್ದಾರೆ.
ಭಟ್ಕಳ ತಾಲೂಕಿನ ಬೈಲೂರು ಗ್ರಾಮದ ನೀರಗದ್ದೆಯ 4 ವರ್ಷದ ಪುಟ್ಟ ಮಗು ಆಟವಾಡುವಾಗ ಬಿದ್ದು ಬಲಗೈ ಮುರಿದುಕೊಂಡಾಗ ಬಡಕುಟುಬಂದ ಆಸರೆಗೆ ನಿಂತ ಉದ್ಯಮಿ ಯಂಗ್ ಒನ್ ಇಂಡಿಯ ಸಂಸ್ಥಾಪಕ ಮಾಸ್ತಪ್ಪ ನಾಯ್ಕ ಮಗುವಿಗೆ ಚಿಕಿತ್ಸೆ ಮೊದಲು ನೀಡಿಸಿ ಆಸ್ಪತ್ರೆಯಲ್ಲಾಗುವ ವೆಚ್ಚವಷ್ಟು ತಾನೇ ಪಾವತಿಸುತ್ತೇನೆ ಎಂದು ಮಗುವಿನ ತಾಯಿಗೆ ಧೈರ್ಯ ತುಂಬಿ ಆಸ್ಪತ್ರೆಯ ಎಲ್ಲಾ ಮೊತ್ತವನ್ನು ಅವರೇ ಬರಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಇವರ ಈ ಕಾರ್ಯಕ್ಕೆ ಮಾಸ್ತಪ್ಪ ನಾಯ್ಕ ಆಪ್ತರಾಗಿರುವ ವಿಶ್ವ ನಾಯ್ಕ ಅಭಿನಂದನೆ ತಿಳಿಸಿದ್ದಾರೆ.