ಸಿದ್ದಾಪುರ: ತಾಲೂಕಿನ ನಿಡಗೋಡ ಅರಣ್ಯ ವಿಭಾಗ ವ್ಯಾಪ್ತಿಗೆ ಬರುವ ಸಂಪಗೋಡ, ಭಂಡಾರಿಕೇರಿ ವ್ಯಾಪ್ತಿಯ ಗ್ರಾಮ ಅರಣ್ಯ ನಿರ್ವಹಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸೋಮವಾರ ಯುವ ಉತ್ಸಾಹಿ ತರಳಿಯ ದೀಪಕ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಪದಾಧಿಕಾರಿ ಸದಸ್ಯರಾಗಿ ಶಶಿಕುಮಾರ ರಾಮಾ ನಾಯ್ಕ ಹೂಕಾರ, 16ನೇ ಮೈಲ್ಕಲ್ ಹನುಮಕ್ಕ ರಂಗಪ್ಪ ಭೋವಿ, ಗಣಪತಿ ಕುಟ್ಟನ್ ನಾಯ್ಕ, ಮಾಗಣಿಯ ಪದ್ಮಾವತಿ ಮಂಜುನಾಥ ನಾಯ್ಕ, ಬಂಗಾರೇಶ್ವರ ಗಜಾನನ ನಾಯ್ಕ, ಪೂರ್ಣಿಮಾ ಮಂಜುನಾಥ ಗೌಡ, ಪರಮೇಶ್ವರ ಗಜಾನನ ಭಟ್ ಗೋಡ್ವಮನೆ, ರವೀಂದ್ರ ವೆಂ. ಹೆಗಡೆ ಹುಲಿಮನೆ, ವನಿತಾ ರವಿ ನಾಯ್ಕ ತರಳಿ, ಸಾವಿತ್ರಿ ಮ. ಹೆಗಡೆ ಮತ್ತಿಗಾರ ಆಯ್ಕೆಯಾದರು. ಈ ವೇಳೆ 15 ವರ್ಷ ಗ್ರಾಮ ಅರಣ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಗಣಪತಿ ನಾಯ್ಕ ತರಳಿ ಅವರನ್ನು ಸನ್ಮಾನಿಸಲಾಯಿತು. ನಿಡಗೋಡ ಫಾರೆಸ್ಟ್ ಅಧಿಕಾರಿ ನರೇಂದ್ರನಾಥ ಕದಂ, ಅರಣ್ಯ ಸಿಬ್ಬಂದಿ ಸುರೇಶ ನಾಯ್ಕ, ಇತರ ಸಿಬ್ಬಂದಿ ಇದ್ದರು.