ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಗುಂದದ 8ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ನಿಖಿತಾ ಮಹಾದೇವ ವೇಳಿಪ ದಾಂಡೇಲಿಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಬಾಲಕಿಯರ 14 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಇವಳ ಸಾಧನೆಗೆ ಹಾಗೂ ಮಾರ್ಗದರ್ಶಕರಾದ ದೈಹಿಕ ಶಿಕ್ಷಣ ಶಿಕ್ಷಕರಾದ ಪಕೀರಪ್ಪ ಧರಿಗೊಂಡಯವರಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಬಿ .ಜಿ, ಸಹಶಿಕ್ಷಕರಾದ ಗೋಕುಲ್ ಎಸ್, ನವೀನ ಶೇಟ್, ಪುರುಷೋತ್ತಮ,ದಿವ್ಯಾ,ರಿಯಾ,ಬಸವರಾಜ, ಸಿಬ್ಬಂದಿ ರವಿ,ಶಾಲಾ ಆಡಳಿತ ಮಂಡಳಿಯವರು, ಗಣ್ಯರು,ಪಾಲಕರು,ಪೋಷಕರು,ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.