ಶಿರಸಿ: ಸಂಹಿತಾ ಮ್ಯೂಸಿಕ್ ಫೋರಮ್ನ 15ನೇ ವಾರ್ಷಿಕ ವಿಶೇಷ ಸಂಗೀತ ಸಮ್ಮೇಳನ ಹಾಗೂ ನಾದ ಸಂಹಿತಾ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಟಿಆರ್ಸಿ ಸಭಾಭವನದಲ್ಲಿ ಡಿ.8ರಂದು ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, 10.30ಕ್ಕೆ ಗಾಯಕಿ ಕಾವ್ಯಶ್ರೀ ಅನಂತ ಹೆಗಡೆ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಹಿತಾ ಮ್ಯೂಸಿಕ್ ಫೋರಮ್ ಅಧ್ಯಕ್ಷ ಸುಬ್ರಾಯ ಹೆಗಡೆ ಕುಪ್ಪನಮನೆ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ವೆಂ.ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಎಲ್.ಎಂ.ಹೆಗಡೆ ಗೋಳಿಕೊಪ್ಪ, ಜಿಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಪಾಲ್ಗೊಳ್ಳುವರು.
ಸಂಜೆ 5ಕ್ಕೆ ಅನಂತ ಹೆಗಡೆ ವಾಜಗಾರ ಅವರಿಂದ ತಬಲಾ ವಾದನ, ಸಂಜೆ 6.30ಕ್ಕೆ ಆಮಂತ್ರಿತ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದ ನಿಖಿಲ್ ಜೋಶಿ ಹುಬ್ಬಳ್ಳಿ ಅವರಿಂದ ಸಿತಾರ್ ವಾದನ, ತಬಲಾದಲ್ಲಿ ಅನಂತ ಹೆಗಡೆ, ಹಾರ್ಮೊನಿಯಂನಲ್ಲಿ ಡಾ.ಸಮೀರ ಬಾದ್ರಿ ಸಿದ್ದಾಪುರ, ಪ್ರಜ್ವಲ ಹೆಗಡೆ ತಟ್ಟೀಸರ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸಾಥ್ ನೀಡುವರು.