Slide
Slide
Slide
previous arrow
next arrow

ಆಚಾರ,ವಿಚಾರ,ಸಂಸ್ಕೃತಿ ರಕ್ಷಿಸಿ, ಸನ್ನಡತೆ ರೂಢಿಸಿಕೊಳ್ಳಿ: ಮಾಧವಾನಂದ ಸ್ವಾಮೀಜಿ

300x250 AD

ಸಿದ್ದಾಪುರ:ತಮ್ಮ ಆಚಾರ-ವಿಚಾರ ಸಂಸ್ಕೃತಿಯನ್ನು ಹವ್ಯಕರು ಉಳಿಸಿಕೊಂಡು ಬರಬೇಕು. ಊರನ್ನು ವೃದ್ಧಾಶ್ರಮವನ್ನಾಗಿ ರೂಪಿಸಬೇಡಿ. ತಂದೆ ತಾಯಿಗಳ ಬಗ್ಗೆ ಗೌರವದ ಭಾವನೆ ಇಟ್ಟುಕೊಂಡು ಸನ್ನಡತೆಯನ್ನು ರೂಢಿಸಿಕೊಳ್ಳುವಂತೆ ಶ್ರೀಮನ್ನೆಲೆಮಾವಿನ ಶ್ರೀ ಶ್ರೀ ಮಾಧವಾನಂದ ಭಾರತೀ ಸ್ವಾಮೀಗಳು ಕರೆ ನೀಡಿದರು.

ಅವರು ಶ್ರೀಮಠ ನೆಲೆಮಾವಿನಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಇವರಿಂದ ಏರ್ಪಡಿಸಿದ್ದ ಪ್ರತಿಬಿಂಬ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿ ಸಾನ್ನಿಧ್ಯ ವಹಿಸಿ ಆಶೀರ್ವಚಿಸಿದರು.

ಶ್ರೀಗಳು ಮಾತನಾಡುತ್ತಾ ಕಲೆ, ಸಾಹಿತ್ಯ, ಸಂಗೀತವನ್ನು ಸತತ ಪರಿಶ್ರಮದೊಂದಿಗೆ ರೂಢಿಸಿಕೊಳ್ಳಬೇಕಾಗುತ್ತದೆ. ಪ್ರತಿಬಿಂಬ ಕಾರ್ಯಕ್ರಮದ ಮೂಲಕ ಹವ್ಯಕರ ಕಲಾ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಉನ್ನತವಾದ ವ್ಯಕ್ತಿತ್ವ ಸಂಪಾದನೆ ನಮ್ಮ ಗುರಿಯಾಗಿರಬೇಕು. ಸಮುದಾಯದ ಒಳಿತಿನ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಲಿ ಎಂದು ಹೇಳಿದರು. ಶಿಕ್ಷಣ ಪ್ರಸಾರದ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಅತಿಥಿಯಾಗಿ ಮಾತನಾಡಿ ಮೂವರು ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹವ್ಯಕ ಸಂಘಟನೆ ಸಾಗುತ್ತಿದೆ. ಸ್ವಾಮೀಜಿಗಳು ಸಮಾಜದ ಕಣ್ಣುಗಳಿದ್ದಂತೆ ಇದ್ದು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.

300x250 AD

ನೆಲೆಮಾವು ಮಠದ ಆಡಳಿತ ಸಮಿತಿ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು ಸಾಂದರ್ಭಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಅಖಿಲ ಹವ್ಯಕ ಮಹಾ ಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ವಹಿಸಿ ಹವ್ಯಕರ ವಿಶಿಷ್ಟವಾದ ಪ್ರತಿಭೆಯನ್ನು ಉಳಿಸಿ ಪೋಷಿಸಿಕೊಂಡು ಬರಬೇಕು. ನಗರ ಸೇರುತ್ತಿರುವುದು ಹವ್ಯಕ ಕುಟುಂಬದಲ್ಲಿ ಅತೀ ಹೆಚ್ಚು ಕೃಷಿಯನ್ನು ಮುಂದುವರಿಸಿ ವೈವಾಹಿಕ ಸಮಸ್ಯೆಯನ್ನು ಅರ್ಥಮಾಡಿಕೊಂಡು ಬದುಕಲು ಕಲಿಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಇದರ ಉಪಾಧ್ಯಕ್ಷ ಶ್ರೀಧರ ಜೆ. ಭಟ್ಟ ಕೆಕ್ಕಾರು, ಗಣಪತಿ ಈಶ್ವರ ಹೆಗಡೆ ಉಂಬಳಮನೆ, ಸೇ.ಸ ಸಂಘ ನೆಲೆಮಾವು ಇದರ ಅಧ್ಯಕ್ಷ ಮತ್ತು ರಾಜಾರಾಮ ಹೆಗಡೆ ಬಿಳೇಕಲ್ ಅಧ್ಯಕ್ಷರು ಗ್ರಾ.ಪಂ. ನಿಲ್ಕುಂದ ಹಾಗೂ ಪ್ರತಿಬಿಂಬ ಸಿದ್ದಾಪುರ ಇದರ ಸಂಚಾಲಕ ಜಿ.ಐ. ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.
ಹವ್ಯಕ ಮಹಾಸಭಾ ನಿರ್ದೇಶಕ ಜಿ.ಎಂ ಹೆಗಡೆ ಕಾಜಿನಮನೆ ಸ್ವಾಗತಿಸಿದರು. ಅಖಿಲ ಹವ್ಯಕ ಮಹಾಸಭೆದ ಕಾರ್ಯದರ್ಶಿ ಪ್ರಶಾಂತ ಕುಮಾರ ಭಟ್ಟ ಮಳವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಜಿ. ಆರ್. ಭಾಗವಾತ್ ತ್ಯಾರ್ಗಲ್ ಮಂದಿಸಿದರು. ವಿನಾಯಕ ಭಟ್ಟ ನೆಲೆಮಾವ ಹಾಗೂ ಜಿ.ಎಸ್ ಹೆಗಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top