ಹಳಿಯಾಳ : ತಾಲೂಕಿನ ಭಾಗವತಿ ಗ್ರಾಮದಲ್ಲಿ ದಾಂಡೇಲಿಯ ಕೀರ್ತಿ ಹಾಗೂ ಅರುಣಾದ್ರಿ ಎಸ್.ರಾವ್ ಇವರ ಮಾಲೀಕತ್ವದ ತಾಜಾ ಕಬ್ಬಿನ ಉತ್ಪನ್ನಗಳನ್ನು ತಯಾರಿಸುವ ಶ್ರೀಯೋಗ್ ಆಗ್ರೋ ಇಂಡಸ್ಟ್ರೀಸ್ ಘಟಕವನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಸ್ಥಳೀಯ ರೈತರಿಗೆ ಅನುಕೂಲವಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರಂಭವಾದ ನೂತನ ಘಟಕವು ಉನ್ನತಿಯನ್ನು ಸಾಧಿಸಲಿ ಎಂದರು.
ಈ ಸಂದರ್ಭದಲ್ಲಿ ಭಾಗವತಿ ಗ್ರಾ.ಪಂ ಅಧ್ಯಕ್ಷರಾದ ಠಕ್ಕು ಬಜಾರಿ ಗೌಳಿ, ಕೆಪಿಸಿಸಿ ಸದಸ್ಯರಾದ ಸುಭಾಷ್ ಕೊರ್ವೇಕರ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ, ಹಳಿಯಾಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ರವಿ ತೋರಣಗಟ್ಟಿ, ದಾಂಡೇಲಿಯ ಉದ್ಯಮಿಗಳಾದ ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ಕರುಣಾಕರ್ ಶೆಟ್ಟಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮುಖಂಡರು, ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.
ಆಗಮಿಸಿದ್ದ ಸರ್ವರನ್ನು ಶ್ರೀಯೋಗ್ ಆಗ್ರೋ ಇಂಡಸ್ಟ್ರೀಸ್ ಮಾಲಕರಾದ ಅರುಣಾದ್ರಿ ರಾವ್, ಕೀರ್ತಿ ಅರುಣಾದ್ರಿ ರಾವ್, ಶ್ರೀಷಾ ಅರುಣಾದ್ರಿ ರಾವ್, ಸುಯೋಗ್ ಅರುಣಾದ್ರಿ ರಾವ್ ಆತ್ಮೀಯವಾಗಿ ಬರಮಾಡಿಕೊಂಡರು.