Slide
Slide
Slide
previous arrow
next arrow

ಮೈನವಿರೇಳಿಸಿದ ‘ಪಾವನಪಾದ’: ‘ಲಯ-ಲಾವಣ್ಯ’ಕ್ಕೆ ತಲೆದೂಗಿದ ಸಭಿಕರು

300x250 AD

ನಾದಾನುಸಂಧಾನಂ ಟ್ರಸ್ಟ್‌ನ ಕಲಾಸೇವೆ ಅನನ್ಯ: ವಿದ್ವಾನ್ ಶರ್ಮ

ಶಿರಸಿ: ಭಾರತ ಕಲಾ ಸಂಪದ್ಭರಿತ ದೇಶ. ಹಲವಾರು ಕಲಾ ಪ್ರಕಾರಗಳಿಗೆ ಈ ದೇಶ ತವರೂರಾಗಿದೆ. ಕಲೆಯನ್ನು ಬೆಳೆಸುವಲ್ಲಿ ಕಲಾವಿದರ ಹಾಗೂ ಕಲಾಭಿಮಾನಿಗಳ ಪಾತ್ರ ಬಹುದೊಡ್ಡದು. ಸಂಗೀತವೇ ಸೇರಿದಂತೆ ಎಲ್ಲಾ ಕಲೆಗಳ ಬೆಳವಣಿಗೆಗೆ ಸಂಘ ಸಂಸ್ಥೆಗಳು ಮುಂದೆ ಬರಬೇಕು. ಆ ದಿಶೆಯಲ್ಲಿ ನಾದಾನುಸಂಧಾನಂ ಟ್ರಸ್ಟ್‌ನ ಕಲಾ ಸೇವೆ ಅನನ್ಯ ಎಂದು ಅಂತರಾಷ್ಟ್ರೀಯ ಕಲಾವಿದರಾದ ಕರ್ನಾಟಕ ಕಲಾ ಶ್ರೀ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಂಗಧಾಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಆನೂರು ಅನಂತಕೃಷ್ಣ ಶರ್ಮ ಟ್ರಸ್ಟ್ ಫಾರ್ ಮ್ಯುಸಿಕ್ ಇವರ ಸಹಯೋಗದಲ್ಲಿ ನಾದಾನುಸಂಧಾನಂ ಟ್ರಸ್ಟ್ ಆಯೋಜಿಸಿರುವ ಎರಡು ದಿನಗಳ ‘ನಾದ-ನೃತ್ಯೋಪಾಸನಂ ಹಾಗೂ ನಾದೋಪಾಸನಂ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇದಿಕೆಯಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶ್ರೀಮತಿ ಸೀಮಾ ಭಾಗ್ವತ್, ರಂಗಧಾಮದ ಮುಖ್ಯಸ್ಥರಾದ ವಿ.ಪಿ ಹೆಗಡೆ ವೈಶಾಲಿ, ಟ್ರಸ್ಟ್‌ನ ಅಧ್ಯಕ್ಷರಾದ ವಿದ್ವಾನ್ ಪ್ರವೀಣ ಭಟ್ಟ ಅಗ್ಗೆರೆ, ಸಂಘಟಕರಾದ ಶ್ರೀಮತಿ ಮೇಧಾ ಭಟ್ಟ ಉಪಸ್ಥಿತದ್ದರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಶ್ರೀಮತಿ ಸೀಮಾ ಭಾಗ್ವತ್ ತಂಡದಿಂದ ನಡೆದ ‘ಪಾವನಪಾದ’ ಎಂಬ ಭರತನಾಟ್ಯ ನೃತ್ಯ ರೂಪಕವು ಕಲಾಭಿಮಾನಿಗಳ ಕರತಾಡನ ಗಳಿಸುವಲ್ಲಿ ಯಶಸ್ವಿಯಾಯಿತು. ವಿಷ್ಣುವಿನ ದಶಾವತಾರ ಕಥೆಯನ್ನೊಳಗೊಂಡ ರೂಪಕದಲ್ಲಿ ವಿಷ್ಣುವಿನ ಪ್ರತಿ ಅವತಾರದ ಕಥೆಯನ್ನು ಮನಮುಟ್ಟುವಂತೆ ವಿ.ಸೀಮಾ ಭಾಗ್ವತ್ ಹಾಗೂ ವಿ.ದೀಪಾ ಭಾಗ್ವತ್ ನೇತೃತ್ವದ ತಂಡ ಪ್ರಸ್ತುತಪಡಿಸಿದರು.

300x250 AD

ನಂತರದಲ್ಲಿ ನಡೆದ ಆನೂರು ಅನಂತಕೃಷ್ಣ ಶರ್ಮ ನೇತೃತ್ವದ ತಂಡದಿಂದ ‘ಲಯ-ಲಾವಣ್ಯ’ ಎಂಬ ವಾದ್ಯ ಗೋಷ್ಠಿ ಅದ್ದೂರಿಯಾಗಿ ನಡೆಯಿತು. ರಾಗ್ ಸರಸ್ವತಿಯಿಂದ ಪ್ರಾರಂಭಗೊಂಡ ಗೋಷ್ಠಿಯು ಲಿಂಗಾಷ್ಟಕ, ಹಲವಾರು ಸ್ತೋತ್ರಗಳನ್ನೊಳಗೊಂಡು ವಿವಿಧ ವಾದ್ಯಗಳ ಸುಸ್ವರದೊಂದಿಗೆ ಪ್ರಸ್ತುತಗೊಂಡು ಸಭಿಕರನ್ನು ತಲೆದೂಗುವಂತೆ ಮಾಡಿತು.

ವಿದ್ವಾನ್ ಮನೋಜ್ ಭಟ್ಟ ಸ್ವಾಗತಿಸಿದರು. ನಾರಾಯಣ ಹೆಗಡೆ ಹಾಗೂ ಶ್ರೀಮತಿ ರೂಪಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.


ಇಂದು ಅ.20,ಭಾನುವಾರ ಸಂಜೆ 4.45ರಿಂದ ಕುಮಾರ ಪೃಥ್ವಿರಾಜ ನಾರಾಯಣ ಕುಲಕರ್ಣಿ ಇವರಿಂದ ಬಾನ್ಸುರಿ ವಾದನ, ಇವರಿಗೆ ತಬಲಾದಲ್ಲಿ ನಾಗರಾಜ ಹೆಗಡೆ, ಬೆಂಗಳೂರು ಸಾಥ್ ನೀಡಲಿದ್ದಾರೆ. ಸಂಜೆ 5.30 ರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಂತರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಲಾವಿದ ಪಂ|| ಶೌನಕ್ ಅಭಿಷೇಕೀ, ಮುಂಬೈ, ಶ್ರೀಮತಿ ಮೇಧಾ ಭಟ್ಟ, ಅಗ್ಗೇರೆ ಭಾಗವಹಿಸಲಿದ್ದು, ಸಂವಾದಿನಿಯಲ್ಲಿ ಪಂ|| ಸುಧಾಂಶು ಕುಲಕರ್ಣಿ, ಬೆಳಗಾವಿ, ತಬಲಾದಲ್ಲಿ ಪಂ|| ಉದಯ ಕುಲಕರ್ಣಿ, ಗೋವಾ, ಮಂಜೀರಾದಲ್ಲಿ  ಅನಂತಮೂರ್ತಿ ಮತ್ತೀಘಟ್ಟ ಸಾಥ್ ನೀಡಲಿದ್ದಾರೆ.

Share This
300x250 AD
300x250 AD
300x250 AD
Back to top