Slide
Slide
Slide
previous arrow
next arrow

ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನಕ್ಕೆ ತೀರ್ಮಾನ: ರವೀಂದ್ರ ನಾಯ್ಕ

300x250 AD

ಹೊನ್ನಾವರ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಬೇಕು ಮತ್ತು ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ನ.7ರಂದು ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ರಾಜ್ಯ ಮಟ್ಟದ ಅರಣ್ಯವಾಸಿಗಳ ಬೃಹತ್ ಶಕ್ತಿ ಪ್ರದರ್ಶನ ಬೆಂಗಳೂರಿನಲ್ಲಿ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಹೊನ್ನಾವರ ತಾಲೂಕಿನ ಮೂಡಗಣಪತಿ ದೇವಸ್ಥಾನ ಸಂಭಾಗಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಬೃಹತ್ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಲೆನಾಡಿನ ಮತ್ತು ಕರಾವಳಿ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವ ಮತ್ತು ಅವೈಜ್ಞಾನಿಕ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸುವದು ಅನಿವಾರ್ಯ ಎಂದು ಅವರು ಹೇಳುತ್ತಾ, ಅರಣ್ಯವಾಸಿಗಳ ಭೂಮಿ ಹಕ್ಕಿನ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದ್ದು ಭೂಮಿ ಹಕ್ಕಿನ ಸಮಸ್ಯೆ ನಿವಾರಣೆ ಕುರಿತು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಸರಕಾರದ ಗಮನ ಸೆಳೆಯುವಲಾಗುವದು ಎಂದು ಹೇಳಿದರು.

ಅಧ್ಯಕ್ಷತೆಯನ್ನ ತಾಲೂಕು ಅಧ್ಯಕ್ಷ ಚಂದ್ರಕಾಂತ ಪಂಚರೆಕರ್, ಸ್ವಾಗತವನ್ನು ನಗರ ಅಧ್ಯಕ್ಷ ಸುರೇಶ ಮೇಸ್ತಾ, ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ರಾಮ ಮರಾಠಿ, ಸುರೇಶ ನಾಯ್ಕ ಕರ್ನಕೋಡ್, ಸಚೀನ ನಾಯ್ಕ ಸಾಲ್ಕೋಡ, ಮಹೇಶ ನಾಯ್ಕ ಕಾನಕ್ಕಿ, ವಾಮನ ನಾಯ್ಕ ಮಂಕಿ  ಮುಂತಾದವರು ಮಾತನಾಡಿದರು. ವೇದಿಕೆಯ ಮೇಲೆ ವಿನೋದ ನಾಯ್ಕ ಎಲ್ಕೊಟಕಿ, ಸಂಕೇತ(ಬೆಂಕಿ), ಗಿರೀಶ ಚಿತ್ತಾರ, ಆರ್.ಟಿ. ನಾಯ್ಕ ಚಿಕ್ಕನಗೋಡ, ಗಜಾನನ ನಾಯ್ಕ ಸಾಲ್ಕೋಡ, ರಜತ ಶೇಕ್ ಉಪಸ್ಥಿತರಿದ್ದರು.

300x250 AD

ಬೃಹತ್ ಸಭೆ:
ತಾಲೂಕಾದ್ಯಂತ ಮೂರು ಸಾವಿರಕ್ಕೂ ಮಿಕ್ಕಿ ಬೃಹತ್ ಅತಿಕ್ರಮಣದಾರರು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಮನೆ ಒಬ್ಬರಂತೆ ಭಾಗವಹಿಸುವಂತೆ ಸಭೆಯಲ್ಲಿ  ನಿರ್ಣಯಿಸಲಾಯಿತ್ತೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top