Slide
Slide
Slide
previous arrow
next arrow

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

300x250 AD

ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತನ್ನ ಸಿದ್ಧಾಂತಗಳ ಮಹತ್ವದ ಬಗ್ಗೆ, ವಿಶ್ಲೇಷಿಸಿ, ಪ್ರಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅ.31 ರೊಳಗಾಗಿ Email: Mailto:kstaessay.kannada@gmail.com & Mailto:kstaessay.english@gmail.com ಕಳುಹಿಸಿಕೊಡಬಹುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನವೆಂಬರ್ 12 ರಂದು ಅಕಾಡೆಮಿಯಲ್ಲಿ ಆಯೋಜಿಸಲಾಗುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಳದಲ್ಲೇ ಪ್ರಬಂಧವನ್ನು ಬರೆಯಬೇಕಾಗಿರುತ್ತದೆ (ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಪ್ರತ್ಯೇಕವಾಗಿ).
ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ.25,000, ದ್ವಿತೀಯ ಬಹಮಾನ ರೂ.15,000, ತೃತೀಯ ಬಹುಮಾನ ರೂ.10,000 ನೀಡಲಾಗುವುದು. ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ.3,000, ದ್ವಿತೀಯ ಬಹುಮಾನ ರೂ.2,000, ತೃತೀಯ ಬಹುಮಾನ ರೂ.1,000 ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಚಂದ್ರಶೇಖರಮೂರ್ತಿ ಎಸ್. ಮೊ. ಸಂ:Tel:+919686449019,Tel:+919686919019 ಮತ್ತು ದೂ. 080 29721550ನ್ನು ಅಥವಾ ಅಕಾಡೆಮಿಯ ವೆಬ್ ಸೈಟ್ http://www.kstacademy.in ಸಂಪರ್ಕಿಸಬಹುದಾಗಿದೆ

300x250 AD
Share This
300x250 AD
300x250 AD
300x250 AD
Back to top