Slide
Slide
Slide
previous arrow
next arrow

ಮದ್ಯವರ್ಜನ ಕಾರ್ಯಕ್ರಮ ಸಮಾಜದ ಅಭಿವೃದ್ಧಿಗೆ ಕಾರಣ: ಎಂ.ಎಚ್.ನಾಯ್ಕ್

300x250 AD

ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆವತಿಯಿಂದ ಗಾಂಧಿಜಯಂತಿ ಸಂಭ್ರಮಾಚರಣೆ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬಿಇಒ ಎಂ.ಎಚ್. ನಾಯ್ಕ ಉದ್ಘಾಟಿಸಿ ಮಾತನಾಡಿ, ಮಹಾತ್ಮಾ ಗಾಂಧಿಜಿಯವರು ಕಂಡ ಗ್ರಾಮಸ್ವರಾಜ್ಯದ ಕನಸನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಸಾಕಾರಗೊಳಿಸುತ್ತಿದ್ದಾರೆ ಎಂದರು. ಕೆಟ್ಟ ವಿಷಯಗಳನ್ನು ತ್ಯಜಿಸಬೇಕು. ಮದ್ಯಮುಕ್ತ ಗ್ರಾಮವನ್ನಾಗಿಸಿಕೊಂಡು, ಹೊಸ ಜೀವನವನ್ನು ನಡೆಸಬೇಕು. ಮದ್ಯವರ್ಜನ ಕಾರ್ಯಕ್ರಮ ಸಮಾಜದ ಅಭಿವೃದ್ಧಿಗೆ ಕಾರಣವಾಗಿದೆ. ಮದ್ಯ ಸೇವನೆ ಮನುಷ್ಯನ ದೇಹವನ್ನು ಮಾತ್ರ ಸುಡುವುದಲ್ಲ. ವ್ಯಕ್ತಿತ್ವವನ್ನು ಸುಡುತ್ತದೆ. ವೀರೇಂದ್ರ ಹೆಗ್ಗಡೆ ಅವರು ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕೆನ್ನುವುದರಿಂದ ಅನೇಕ ಕಾರ್ಯಕ್ರಮ ಜಾರಿಗೊಳಿಸುತ್ತಿದ್ದು ಅದು ಸಫಲವಾಗುತ್ತಿರುವುದು ಸಹ ಗ್ರಾಮೀಣಾಭಿವೃದ್ಧಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಸ ನಾಯ್ಕ ಮಾತನಾಡಿ, ಕಾನಸೂರು ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಅಭಿವೃದ್ಧಿ ಆಗುತ್ತಿದೆ. ಮದ್ಯವರ್ಜನ ಶಿಬಿರಗಳಿಂದ ಜನತೆ ಪ್ರೇರಣೆಗೊಂಡು ಪರಿವರ್ತನೆ ಆಗಿದ್ದಾರೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ನಿವೃತ ಉಪನ್ಯಾಸಕ ರಾಮು ಕಿಣಿ ದಿಕ್ಸೂಚಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಳಿಂಗರಾಜು, ಉಪಾಧ್ಯಕ್ಷೆ ಗೌರಿ ನಾಯ್ಕ, ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿವೇಕ್ ರಾಯ್ಕರ್, ರಮೇಶ ಹಾರ್ಸಿಮನೆ, ಗುರುರಾಜ ಶಾನಭಾಗ, ಲಕ್ಷ್ಮಿ ರಾಜು, ಶಂಕರ ಭಟ್ಟ, ಗಣಪತಿ ಗೌಡ, ಬರಮಪ್ಪ ಗೌಡ, ಶೌರ್ಯ ತಂಡದ ಚಂದ್ರಶೇಖರ, ಮಂಜುನಾಥ ಇತರರಿದ್ದರು.
ಇದೇ ಸಂದರ್ಭದಲ್ಲಿ ಜನಜಾಗೃತಿ ಅಣ್ಣಾ ರಮೇಶ ಗೌಡ ಅವರಿಗೆ ಹಾಗೂ ಜನಜಾಗೃತಿ ಮಿತ್ರ ಪ್ರಮಾಣಪತ್ರವನ್ನು ನರಸಿಂಹ ಗೌಡ ಹಾಗೂ ವಂಕಟೇಶ ಗೌಡ ಅವರಿಗೆ ನೀಡಲಾಯಿತು.
ತಾಲೂಕು ಯೋಜನಾಧಿಕಾರಿ ಗಿರೀಶ ಜಿ.ಪಿ. ಸ್ವಾಗತಿಸಿದರು. ಶಿರಸಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಸಮಾವೇಶದ ಹಕ್ಕೋತ್ತಾಯ ಮಂಡಿಸಿದರು. ಯಲ್ಲಾಪುರ ತಾಲೂಕು ಯೋಜನಾಧಿಕಾರಿ ಹನುಮಂತ ಗೌಡ ವಂದಿಸಿದರು. ಉದಯ ಹಾಗೂ ಲಲಿತಾ ಕಾರ್ಯಕ್ರಮ ನಿರ್ವಹಿಸಿದರು.ಯೋಜನೆಯ ಮೇಲ್ವಿಚಾರಕರುಗಳು ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಇದಕ್ಕೂ ಪೂರ್ವದಲ್ಲಿ ಪಟ್ಟಣದ ನೆಹರು ಮೈದಾನದಿಂದ ಪ್ರಾರಂಭಗೊಂಡ ಗಾಂಧಿ ಸ್ಮೃತಿ ಬೃಹತ್ ಜನಜಾಗೃತಿ ಜಾಥಾವನ್ನು ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಹಾಗೂ ಸದಸ್ಯ ಸುಭಾಷ ನಾಯ್ಕ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಜಾಥಾವು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಂಕರಮಠದವರೆಗೆ ಡೊಳ್ಳು ಕುಣಿತದೊಂದಿಗೆ ನಡೆಯಿತು.

300x250 AD

Share This
300x250 AD
300x250 AD
300x250 AD
Back to top