ಸಿದ್ದಾಪುರ: ಅರಣ್ಯ ಭೂಮಿ ಅರಣ್ಯೇತರ ಚಟುವಟಿಕೆಗೆ ಕಾನೂನು ಮತ್ತು ನ್ಯಾಯಾಲಯದ ನಿರ್ಬಂಧನೆಯಿಂದ ಅರಣ್ಯಭೂಮಿ ಹಕ್ಕಿನಿಂದ ವಂಚಿತರಾಗಿ ಅರಣ್ಯವಾಸಿಗಳು ಕಾನೂನು ಸಂಕೋಲೆಯ ಕೊಂಡಿಯಲ್ಲಿ ಬಂಧನವಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯತ್ ಕುಳ್ಳೇಯಲ್ಲಿ ನಿಲ್ಕುಂದ, ಹೆಗ್ಗರಣೆ ಮತ್ತು ತಂಡಾಗುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉಧ್ದೇಶಿಸಿ ಮಾತನಾಡುತ್ತ ಹೇಳಿದರು.
ಅರಣ್ಯ ಭೂಮಿ ಹಕ್ಕಿನ ಕಾಯಿದೆ ಅನುಷ್ಠಾನದಲ್ಲಿ ವಿಫಲ ಮತ್ತು ಇಚ್ಚಾಶಕ್ತಿ ಕೊರತೆಯಿಂದ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ವಂಚಿತರಾಗಿದ್ದಾರೆ. ದಿನದಿಂದ ದಿನಕ್ಕೆ ಅರಣ್ಯ ಕಾನೂನು ಮತ್ತು ಸುಪ್ರೀಂ ಕೊರ್ಟನ ಆದೇಶದಿಂದ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ನಿಯಂತ್ರಣ ಹೆಚ್ಚುತ್ತಿರುವುದರಿಂದ ಇಂದು ಅರಣ್ಯವಾಸಿಗಳು ಕಾನೂನು ತೊಡಕಿನಲ್ಲಿ ಸಿಲುಕಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ನಾಗಪತಿ ಗೌಡ ಹುತ್ಗಾರ್, ಸಂಚಾಲಕ ಸೀತರಾಮ .ಎಚ್. ಗೌಡ ಹುಕ್ಕಳ್ಳಿ, ಗ್ರಾಮಪಂಚಾಯತ್ ಸದ್ಯಸ ರವೀಶ ಗೌಡ, ಜಿಲ್ಲಾ ಸಂಚಾಲಕ ಹರಿಹರ ನಾಯ್ಕ ಓಂಕಾರ್, ಸೀತರಾಮ ಲಿಂಗು ಗೌಡ ಹಿರಿಯ ದುರೀಣರು, ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಜಿ. ಹೆಗಡೆ, ದ್ಯಾವ ಗೌಡ ಹೆಗ್ಗೆ, ಹನುಮಂತ ಗೌಡ ಬೀಳೆಕಲ್‌ಮನೆ, ಬೀರಾ ಕೆರಿಯಾ ಗೌಡ ಹುಕ್ಕಳಿ ಮುಂತಾದವರು ಮಾತನಾಡಿದರು. ವೆಂಕಟರಮಣ ಗೌಡ ಕುಳ್ಳೆ, ಮಾದೇವ ಗಣಪಯ್ಯ ನಾಯ್ಕ, ಆನಂದ ಗೌಡ ನಡಕಾರ್‌ಮನೆ, ಮಾದೇವ ನಾಯ್ಕ ದೊಂಬೆ ಮುಂತಾದವರು ಉಪಸ್ಥಿತರಿದ್ದರು. ಸಂಚಾಲಕ ಮಂಜುನಾಥ ನಾಯ್ಕ ಹುತ್ಗಾರ್ ಸ್ವಾಗತಿಸಿ ವಂದಿಸಿದ್ದರು.
ಬೆಂಗಳೂರು ಚಲೋ:
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ನವೆಂಬರ ೭ ರ ಬೆಂಗಳೂರು ಚಲೋ ಯಶ್ವಸಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.