ಸಿದ್ದಾಪುರ: ಮನೆಗೆ ಸಿಡಿಲು ಬಡಿದು ಅಸ್ವಸ್ಥಗೊಂಡು ಚೇತರಿಸಿಕೊಂಡ ಸಿದ್ದಾಪುರ ತಾಲೂಕಿನ ಗಾಳಿಜಡ್ಡಿಯ ವಿದ್ಯಾ ಚನ್ನಯ್ಯ,ಸುನಂದ ಚನ್ನಯ್ಯ, ಸುನೀತಾ ಚನ್ನಯ್ಯ,ವಿನಾಯಕ ಚನ್ನಯ್ಯ ಪ್ರೇಮಾ ಚನ್ನಯ್ಯ ಹಾಗೂ ವಿಹಾನ್ ಚನ್ನಯ್ಯ ಅವರ ಮನೆಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅಶೋಕ ನಾಯ್ಕ, ಶಾಂತಕುಮಾರ ಗೌಡರ್, ಪ್ರಮುಖರಾದ ನರ‍್ಲಾಮಿನ್ ಸಾಬ್ ಹಾರ್ಸಿಕಟ್ಟಾ, ಸಿ.ಆರ್.ನಾಯ್ಕ, ಬಾಲಕೃಷ್ಣ ಕೋಲಸಿರ್ಸಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಇತರರಿದ್ದರು.
ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದ ಕುಟುಂಬಕ್ಕೆ ಶಾಸಕ ಭೀಮಣ್ಣ ಸಾಂತ್ವನ
