Slide
Slide
Slide
previous arrow
next arrow

ಸ್ವಾಮಿ ವಿವೇಕಾನಂದರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವಿಜಯಕುಮಾರ್

300x250 AD

ಭಟ್ಕಳ: ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಜಾಲಿ ಇದರ ಉದ್ಘಾಟನಾ ಕಾರ್ಯಕ್ರಮವು ಭಾನುವಾರದಂದು ಇಲ್ಲಿನ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘ ಜಾಲಿಯಲ್ಲಿ ಜರುಗಿತು.

ಕಾರ್ಯಕ್ರಮವನ್ನು ಹಿಂದು ಜನಜಾಗೃತಿ ಸಮಿತಿ ಸಮನ್ವಯಕರಾದ ದಕ್ಷಿಣ ಕನ್ನಡ ವಿಜಯಕುಮಾರ ಉದ್ಘಾಟಿಸಿ ಮಾತನಾಡಿ, ಆದರ್ಶ ಸ್ವಾಮಿ ವಿವೇಕಾನಂದರು ಮತ್ತು ಛತ್ರಪತಿ ಶಿವಾಜಿ ಮತ್ತೆ ಹುಟ್ಟಿ ಬರಲಿ ಎಂಬ ಆಶಯ ನಮ್ಮದಾಗಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ಆ ದೇವರ ಪ್ರೇರಣೆಯೊಂದಿಗೆ ಮುನ್ನಡೆಯಲಿ. ಇವರ ಈ ಸಾಮಾಜಿಕ, ಆಧ್ಯಾತ್ಮಿಕದ ಕಾರ್ಯವನ್ನು ಈ‌ ಸಂಘಟನೆಯು ನಡೆಸಿಕೊಂಡು ಹೋಗುವಂತಾಗಬೇಕು. ಕೇವಲ‌ ಗ್ರಾಮಕ್ಕೆ ಮೀಸಲಾಗದೇ ಸಂಘಟನೆಯು ಮಿತಿ ತಾಲೂಕು ಜಿಲ್ಲೆಗೂ ಪಸರಿಸಲಿ ಎಂದು ಹಾರೈಸಿದರು. 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಬ್ಬನಕಲ್ ಯಶ್ವಂತ ಆರ್. ನಾಯ್ಕ, ನಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ ಗ್ರಾಮದಲ್ಲಿ ಹೊಸ ದಿಕ್ಕಿನೆಡೆಗೆ ಇಲ್ಲಿನ ಯುವಕರ ಸಾಮಾಜಿಕ ಕಾರ್ಯಕ್ಕೆ ಬೆಂಬಲಿಸಲು ಬಂದಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳ ಬಳಗ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ನನಗೆ ಸಂತಸವಾಗಿದೆ ಎಂದರು. 

ಸರಿಯಾಗಿ ಧರಿಸಲು ಬಟ್ಟೆ ಇರದ ವೇಳೆ ಭಾರತ ವಿಶ್ವಗುರು ಹಾಗೂ ಕಂಡಕಂಡ ಕಲ್ಲಿಗೆ ಪೂಜಿಸುವ ಜನರು ಭಾರತೀಯರು ಎಂದು ವಿದೇಶಿಗರು ಅವಮಾನಿಸಿದ್ದ ನಮ್ಮ ದೇಶದ ಶಕ್ತಿಯನ್ನು ಪ್ರಪಂಚಕ್ಕೆ ಪಸರಿಸಿದ ಸ್ವಾಮಿ ವಿವೇಕಾನಂದರ ಜೀವನಗಾಥೆಯನ್ನು ಎಲ್ಲರು ಓದಬೇಕು. ವಿದೇಶಿಗರಿಗೆ ಭಾರತದ ಮೇಲೆ‌ ಇದ್ದ ತಪ್ಪು ಕಲ್ಪನೆಯನ್ನು ಬದಲಾಯಿಸಿದ ಸಂತರು ಸ್ವಾಮಿ ವಿವೇಕಾನಂದರಾಗಿದ್ದಾರೆ. 

ಸೇವೆಗಾಗಿ ಬದುಕಿದ ಜೀವ ವಿವೇಕಾನಂದರಾಗಿದ್ದು, ಅವರ ಹೆಸರಿನಂತೆಯೇ ಎಲ್ಲೆಡೆ ಜನರಿಗೆ ಸಹಾಯ ಮಾಡುವಂತಾಗಬೇಕು. ಅಂದು ತುತ್ತು ಅನ್ನಕ್ಕೂ ಕಷ್ಟದ ಜೀವನವು ಬದಲಾಗಿ‌ ಇಂದು ದುಡಿದ ಸ್ವಲ್ಪದಲ್ಲಿ ಕಷ್ಟದಲ್ಲಿದ್ದವರಿಗೆ ಧನ ಸಹಾಯ ಮಾಡುವ ಮನಸ್ಥಿತಿ ಹೆಮ್ಮರವಾಗಿ ಬೆಳೆಯಲಿ. ಈ ಸಂಘಟನೆಗೆ ಸ್ತ್ರೀಯರನ್ನು ಸೇರಿಸಿಕೊಂಡು ಸಾಮಾಜಿಕ ಕೆಲಸ ಮಾಡಿ ಅವರು ಸಹ ಸಮಾಜದಲ್ಲಿ ಸರಿ ಸಮಾನರಾಗಿದ್ದಾರೆ ಎಂದರು.

ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೇಶನ್ ಸದಸ್ಯರು, ಖ್ಯಾತ ವಕೀಲ ಜೆ.ಡಿ. ಭಟ್ ಜಾಲಿ ಮಾತನಾಡಿ ‘ದೇಶದ ಮಹಾ ಪುರುಷ ಹಿಂದು ಸನಾತನ ಧರ್ಮವನ್ನು ಅದರ ಶಕ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ. ಅವರ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ ಇದು ಉತ್ತಮವಾಗಿ ನಡೆಯಬೇಕು. ಜನರ ಉತ್ತಮ ಸ್ಪಂದನೆಯೊಂದಿಗೆ ನಿಮ್ಮ ಕಾರ್ಯ ಮುನ್ನಡೆಯಬೇಕು. ನಮ್ಮ ಗ್ರಾಮದಲ್ಲಿನ ಎಲ್ಲಾ ಸಂಘ ಸಂಸ್ಥೆಗಳಿದ್ದು, ಎಲ್ಲರದ್ದು ಒಂದೇ ಗುರಿಯಾಗಿರಬೇಕು. ಅದು ಜನ ಸೇವೆಯಾಗಬೇಕು. ಸಂಸ್ಥೆಯಲ್ಲಿನ ಎಲ್ಲ ಸದಸ್ಯರ ಸ್ಪಂದನೆಯಿಂದಲೇ ಸಮಾಜ ಕಟ್ಟಲು ಸಾಧ್ಯ. ಇನ್ನು ಹಣದ ವಿಚಾರದಲ್ಲಿಯೂ ಸಹ ಉತ್ತಮ ನಿಗದಿತ ಮೊತ್ತ ಇಟ್ಟು ಸದೃಢವಾಗಿ ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಿಮ್ಮದಾಗಿರಬೇಕು. 

300x250 AD

ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೇಶನ್ ಅಧ್ಯಕ್ಷ ವಸಂತ ಎಮ್. ನಾಯ್ಕ ಮಾತನಾಡಿ, ಒಂದುವರೆ ವರ್ಷದ ಹಿಂದಿನ ಕನಸು. ನಮ್ಮಿಂದ ಸಮಾಜಕ್ಕೆ ಸೇವೆ ಸಿಗಬೇಕು ಎಂಬ ಉದ್ದೇಶ. ಸಾಕಷ್ಟು ಸಮಯದ ತಯಾರಿ ನಡೆಸಿ ಯುವಕರನ್ನು ಒಗ್ಗೂಡಿಸಿ ಸಾಮಾಜಿಕ ಸೇವೆಗೆ ಅಣಿಯಾದೆವು. ಜೀವನದ ಕಷ್ಟದಲ್ಲಿದ್ದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಕಾರ್ಯ ಮಾಡಲಿದ್ದೇವೆ. 90 ಜನರ ಸದಸ್ಯರ ಶಕ್ತಿಯಿಂದ ಈ ಫೌಂಡೇಶನ್ ರಚನೆ ಮಾಡಿದ್ದೇವೆ. ಯಾವುದೇ ಅಧಿಕಾರ ಸ್ಥಾನಮಾನದ ಹಂಗಿಲ್ಲದೇ ಎಲ್ಲರು ಒಗ್ಗಟ್ಟಾಗಿ ಈ ಸಂಸ್ಥೆ ಬೆಳೆಸಲಿದ್ದೇವೆ ಎಂದರು.

ಇದಕ್ಕೂ ಪೂರ್ವದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ಯಶ್ವಂತ ನಾಯ್ಕ ಹಾಗೂ ಖ್ಯಾತ ವಕೀಲ ಜೆ.ಡಿ.ಭಟ್ ಜಾಲಿ ಫೌಂಡೇಶನ್‌ನ ನಾಮಫಲಕವನ್ನು ಲೋಕಾರ್ಪಣೆಗೊಳಿಸಿದರು. 

ವೇದಿಕೆಯಲ್ಲಿ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾದೇವ ಡಿ. ನಾಯ್ಕ, ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೇಶನ್ ಉಪಾಧ್ಯಕ್ಷ ದೇವರಾಜ ಕೆ. ಮೊಗೇರ, ವೆಂಕಟೇಶ ಬಿ. ನಾಯ್ಕ, ವಿನಾಯಕ ನಾಯ್ಕ, ಗಜಾನನ ಆಚಾರಿ, ಸದಸ್ಯ ಶ್ರೀಧರ ಕೆ. ಗೊಂಡ, ಖಜಾಂಚಿ ವಸಂತ ನಾಯ್ಕ ಬಬ್ಬನಕಲ್, ಸದಸ್ಯ ಹಾಗೂ ಗುತ್ತಿಗೆದಾರ ಸುಧಾಕರ್ ಎನ್. ಖಾರ್ವಿ ಮುಂತಾದವರು ಇದ್ದರು. ಫೌಂಡೇಶನ್ ಕಾರ್ಯದರ್ಶಿ ಮಾರುತಿ‌ ಜೆ. ನಾಯ್ಕ ಸಂಘದ ವರದಿ ವಾಚನ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ನಂತರ ಹಿಂದು ಜನಜಾಗೃತಿ ಸಮಿತಿ ಸಮನ್ವಯಕರಾದ ದಕ್ಷಿಣ ಕನ್ನಡ ವಿಜಯಕುಮಾರ ಅವರಿಂದ ಆನಂದಮಯ ಜೀವನಕ್ಕಾಗಿ ಆಧ್ಯಾತ್ಮ ಎಂಬ ವಿಷಯದಡಿಯಲ್ಲಿ ಸನಾತನ ಸಂಜೀವಿನಿ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Share This
300x250 AD
300x250 AD
300x250 AD
Back to top