Slide
Slide
Slide
previous arrow
next arrow

ದಾಂಡೇಲಿಯಲ್ಲಿ ವ್ಯಾಪಕ ಮಳೆ : ಅಂಗಡಿ, ಮನೆಗಳಿಗೆ ನುಗ್ಗಿದ ಗಟಾರ ನೀರು

300x250 AD

ದಾಂಡೇಲಿ : ನಗರದಲ್ಲಿ ವ್ಯಾಪಕವಾಗಿ ಮಳೆಯಾಗಿ ಪಟೇಲ್ ವೃತ್ತದ ಹತ್ತಿರ ಎರಡು ಅಂಗಡಿ ಸೇರಿದಂತೆ ಸ್ಥಳೀಯ ಮನೆಗಳಿಗೆ ನೀರು ನುಗ್ಗಿರುವ ಘಟನೆ ಶನಿವಾರ ನಡೆದಿದೆ.

ನಗರದ ಪಟೇಲ್ ವೃತ್ತದ ಹತ್ತಿರ ಕಳೆದೆರಡು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಬಿದಿರನ್ನು ತುಂಡರಿಸಿ ಅಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಮಳೆಯ ನೀರು ಗಟರದಲ್ಲಿ ಸರಾಗವಾಗಿ ಹರಿಯದೆ ಇರುವುದರಿಂದ ಮಳೆಯ ನೀರು ಹಾಗು ತ್ಯಾಜ್ಯ ನೀರು ತುಂಬಿ ರಸ್ತೆ ಹಾಗೂ ಪಕ್ಕದಲ್ಲಿರುವ ಎರಡು ಅಂಗಡಿಗಳಿಗೆ ಮತ್ತು ಹತ್ತಿರದ ಮನೆಗಳಿಗೆ ನುಗ್ಗಿದೆ. ಅಂಗಡಿಗೆ ಮಳೆ ನೀರು ನುಗ್ಗಿರುವುದರಿಂದ ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ.

300x250 AD

ಗಟಾರದ ಮೇಲೆ ರಾಶಿ ಹಾಕಿಟ್ಟಿರುವ ಬಿದಿರು ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top