ಕುಮಟಾ: ಕುಮಟಾದ ಹೆಮ್ಮೆಯ ಪುತ್ರ ಡಾ. ಗಣಪತಿ ವಿ.ಶಾನಭಾಗ ಇವರ ಕೆಮಿಕಲ್ ಸೈನ್ಸ್ನಲ್ಲಿ ಮಾಡಿದ ಅತ್ಯುತ್ತಮ ಸಂಶೋಧನೆಯ ಸಾಧನೆಗೆ ಲಂಡನ್ನಿನ ಫೆಲೋ ಆಫ್ ದಿ ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ (ಎಫ್‌ಆರ್‌ಎಸ್‌ಸಿ) ಅತ್ಯುನ್ನತ ಗೌರವಕ್ಕೆ ಭಾಜನರಾಗಿ ದೇಶವೇ ಹೆಮ್ಮೆ ಪಡುವ ಸಾಧನೆಯನ್ನು ಮಾಡಿದ್ದಾರೆ. ಇವರು ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹೆಮ್ಮೆಯ ಪೂರ್ವ ವಿದ್ಯಾರ್ಥಿ. ಕುಮಟಾದ ಪ್ರತಿಷ್ಟಿತ ವಕೀಲರಾದ ದಿ. ವಿ.ಎನ್. ಶಾನಭಾಗ ಇವರ ಕಿರಿಯ ಪುತ್ರ. ತನ್ನ ಅಭೂತಪೂರ್ವ ಯಶಸ್ಸಿನಲ್ಲಿ ತಾನು ಪಿಎಚ್‌ಡಿ ಅಧ್ಯಯನ ನಡೆಸಿದ ಪುಣೆಯ ಪ್ರಸಿದ್ಧ ಸಿಎಸ್‌ಆಯ್‌ಆರ್ ನ್ಯಾಶನಲ್ ಕೆಮಿಕಲ್ ಲೆಬೋರೇಟರಿಮತ್ತು ಪ್ರಸಕ್ತ ಸಹ ಪ್ರಾಧ್ಯಾಪಕರು ಹಾಗೂ ವಿಭಾಗಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಸೈಂಟಿಫಿಕ್ ರೀಸರ್ಚ್, ಮೆನೇಜಮೆಂಟ್, ಡೈರೆಕ್ಟರ್ ಡಾ.ಎಸ್.ಬಿ.ಹಳ್ಳ್ಲಿಗುಡಿ ಇವರ ಮಾರ್ಗದರ್ಶನ ಹಾಗೂ ಎಲ್ಲ ಸಿಬ್ಬಂದಿಗಳ ಸಹಕಾರವನ್ನು ಇವರು ಸ್ಮರಿಸುತ್ತಾರೆ. ಇವರ ಸಾಧನೆಗೆ ಕೆನರಾಕಾಲೇಜು ಸೊಸೈಟಿಯ ಸದಸ್ಯರು ಹಾಗೂ ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸುತ್ತಾರೆ. ಭವಿಷ್ಯದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ ಇವರು ಇನ್ನೂ ಹೆಚ್ಚಿನ ಸಾಧನೆಗೈಯಲಿ ಎಂದು ಹಾರೈಸಿದ್ದಾರೆ.