ಅಂಕೋಲಾ: 2024-25ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಇಲಾಖಾ ಅನುಮೋದಿತ ಸಂಸ್ಥೆಗಳಿಂದ ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ನೀರಾವರಿ (ಹನಿ ನೀರಾವರಿ) ಘಟಕ ಅಳವಡಿಕೆಗಾಗಿ ಮಾರ್ಗಸೂಚಿ ಪ್ರಕಾರ 5 ಎಕರೆ ವರೆಗಿನ ಪ್ರದೇಶಕ್ಕೆ ಎಲ್ಲಾ ( ಪ.ಜಾತಿ, ಪ.ಪಂಗಡ ಹಾಗೂ ಸಾಮಾನ್ಯ ವರ್ಗದ) ರೈತರಿಗೆ 90% ರಷ್ಟು ಸಹಾಯಧನ ನೀಡಲಾಗುವುದು , 5 ಎಕರೆಗೂ ಮೇಲ್ಪಟ್ಟು ಗರಿಷ್ಟ 12.5 ಎಕರೆವರೆಗಿನ ಪ್ರದೇಶಕ್ಕೆ 45% ರಷ್ಟು ಸಹಾಯಧನವನ್ನು ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಅಂಕೋಲಾ ಕಛೇರಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.