Slide
Slide
Slide
previous arrow
next arrow

ಜನನಿ ಖಯಾಲ್ ಉತ್ಸವದಲ್ಲಿ ಮೈನವಿರೇಳಿಸಿದ ಐಹೊಳೆ ಗಾನಸುಧೆ

300x250 AD

ಜೀವನದ ಸಾಧನೆಗೆ ಶಾಸ್ತ್ರೀಯ ಸಂಗೀತ ಬಹಳ ಉಪಕಾರಿ: ಆರ್.ಎನ್.ಭಟ್ ಸುಗಾವಿ

ಶಿರಸಿ: ಜೀವನದ ಸಾಧನೆಗೆ ಶಾಸ್ತ್ರೀಯ ಸಂಗೀತ ಬಹಳ ಉಪಕಾರಿಯಾಗಿದ್ದು, ಇದು ಕೆಲವೊಂದು ಹಂತದಲ್ಲಿ ಮಾನಸಿಕ ರೋಗ ನಿವಾರಣೆಯು ಕೂಡ ಆಗಬಲ್ಲದು ಎಂದು ಆರ್.ಎನ್. ಭಟ್ ಸುಗಾವಿ ಹೇಳಿದರು.

ನಗರದ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಸಭಾಭವನದಲ್ಲಿ ಜನನಿ ಮ್ಯೂಸಿಕ್ ಸಂಸ್ಥೆಯಿಂದ ಎರಡು ದಿನಗಳ ಕಾಲ ನಡೆಯುವ ಖಯಾಲ್ ಉತ್ಸವಕ್ಕೆ ದೀಪ ಪ್ರಜ್ವಲ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರಾಗಲಿ ಪುಟ್ಟ ಮಕ್ಕಳಾಗಲಿ ಅಭ್ಯಾಸ ಮಾಡುವ ಹಂತದಲ್ಲಿ ಪ್ರಚಾರದ ಗೀಳಿಗೆ ಬೀಳದೆ ಚೆನ್ನಾಗಿ ಅಭ್ಯಾಸ ಮಾಡಿ ಸಾಧನೆಗೈದರೆ ಆಗ ತನ್ನಿಂದ ತಾನೇ ತಮಗೆ ಕೀರ್ತಿ ಗೌರವ ಕೂಡ ಸಮಾಜದಲ್ಲಿ ದೊರೆಯುತ್ತದೆ ಎಂದರು. ಅತಿಥಿಯಾಗಿದ್ದ ಸಂಗೀತ ಉಪನ್ಯಾಸಕ ಹಾಗೂ ಗಾಯಕ ಕೃಷ್ಣಮೂರ್ತಿ ಭಟ್ ಮಾತನಾಡಿ ಶುಭ ಹಾರೈಸಿದರು.  ಜನನಿ ಮ್ಯೂಸಿಕ್‌ನ ದಿನೇಶ್ ಹೆಗಡೆ ಹಾಗು ವಿದೂಷಿ ರೇಖಾ ದಿನೇಶ್ ವೇದಿಕೆಯಲ್ಲಿದ್ದರು.

ಖಯಾಲ್ ಉತ್ಸವದ ಮೊದಲ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ  ಸದಾಶಿವ ಐಹೊಳೆ ಧಾರವಾಡರವರ ಗಾನಸುಧೆ ಸಂಗೀತಾಭಿಮಾನಿಗಳಿಗೆ ವೈವಿಧ್ಯಮಯ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು. ಐಹೊಳೆ ಗಾಯನದಲ್ಲಿ ಅವರ ಕಂಠಸಿರಿಗೆ ಶಿರಸಿಯ ಜನತೆ ತಲೆದೂಗಿದ್ದು ಅಪರೂಪದ ಖಯಾಲ್ ಉತ್ಸವವಾಗಿ ಹೊರಹೊಮ್ಮಿತು.

300x250 AD

ಸದಾಶಿವ ಐಹೊಳೆ ಪ್ರಾರಂಭದಲ್ಲಿ ರಾಗ್ ಘೋರಕ್ ಕಲ್ಯಾಣವನ್ನು ಪ್ರಸ್ತುತಗೊಳಿಸುತ್ತಾ ನಂತರ 80 ವರ್ಷದ ಅಭಿಮಾನಿಯ ಕೋರಿಕೆಯಕೆಯ ಮೇರೆಗೆ ಭಕ್ತಿ ಗೀತೆ ಹಾಡುತ್ತ ಅಭಂಗ ಪ್ರಸ್ತುತಪಡಿಸಿ ತಮ್ಮ ಸಂಗೀತ ಕಚೇರಿಯನ್ನು ಸಮಾಪ್ತಿಗೊಳಿಸಿದರು. ಇವರಿಗೆ ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ವರ್ಗಾಸರ ಹಾಗೂ ತಬಲಾದಲ್ಲಿ ಗಣೇಶ್ ಗುಂಡ್ಕಲ್ ಸಮರ್ಥವಾಗಿ ಸಾತ್ ನೀಡಿದರು. ಹಿನ್ನೆಲೆಯ ತಂಬೂರದಲ್ಲಿ ಡಾ. ಗೋಪಾಲಕೃಷ್ಣ ಹವಲದಾರ್ ಹಾಗೂ ಪೃಥ್ವಿ ಬೊಮ್ಮನಹಳ್ಳಿ ಸಹಕರಿಸಿದರು. ತಾಳದಲ್ಲಿ ಕಿರಣ್ ಕಾನ್ಗೋಡ್ ಸಾತ್ ನೀಡಿದರು.

ಸದಾಶಿವ ಐಹೊಳೆ ಅವರ ಗಾಯನ ಪೂರ್ವದಲ್ಲಿ ನಡೆದ ಸಂಪದಾ ಎಸ್., ಸ್ನೇಹ ಅಮ್ಮಿನಳ್ಳಿ , ಮಾನಸಾ ಹೆಗಡೆ,  ಪೃಥ್ವಿ ಬೊಮ್ಮನಹಳ್ಳಿ, ಇವರುಗಳು ವಿವಿಧ ರಾಗಗಳಲ್ಲಿ ಸಮ್ಮಿಶ್ರಗೊಂಡ ತರಾನಾಗಳನ್ನು ಹಾಡಿ ಸೈ ಎನಿಸಿಕೊಂಡರು. ತಬಲಾದಲ್ಲಿ ರಾಮದಾಸ್ ಭಟ್ ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ಸಹಕರಿಸಿದರು. ಖಯಾಲ್ ಗಾನದ  ಮತ್ತೊಂದು ಹಂತವಾಗಿ ನಡೆದ ಗಾಯನದಲ್ಲಿ ಸ್ನೇಹಾ ಹೆಗಡೆ, ರೇಖಾ ಭಟ್, ಶೈಲಾ ಹೆಗಡೆ, ಶರಧಿ ಫಾಯ್ದೆ, ಪ್ರಿಯಾ ದೈವಜ್ಞ ತಮ್ಮ ಗಾನ ನಡೆಸಿಕೊಟ್ಟರೆ, ಇನ್ನೊಂದು ಗಾಯನದಲ್ಲಿ ಸುಪರ್ಣಾ ಹೆಗಡೆ, ಅರ್ಚನಾ ಹೆಗಡೆ, ಸುಮನ್ ಹೆಗಡೆ, ಡಾ.ಪೂರ್ಣಿಮಾ, ಲತಾ ಕೊಪ್ಪದ್, ಇವರುಗಳು ಗಾಯನವನ್ನು ಪ್ರಸ್ತುತಪಡಿಸಿದರು. ಇವರ ಗಾಯನಕ್ಕೆ ತಬಲಾದಲ್ಲಿ ಕಿರಣ್ ಹೆಗಡೆ ಕಾನ್ಗೋಡ್  ಸಹಕರಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top