ಶಿರಸಿ: 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಜೆ.ಎಂ.ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ ಪದವಿ ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ. ಬಾಲಕಿಯರ ವಿಭಾಗ ಕಬ್ಬಡ್ಡಿ ಪ್ರಥಮ, ಟೆನಿಕ್ವಾಯಟ್ ಪ್ರಥಮ ಖೋಖೋ ದ್ವಿತೀಯ ಬಾಲಕರ ವಿಭಾಗ ಟೆನಿಕ್ವಾಯಟ್ ಪ್ರಥಮ, ಬಿ.ಬಿ.ಟಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟದಲ್ಲಿ ಭಾಗವಹಿಸಿ ಬಾಲಕಿಯರ ಟೆನಿಕ್ವಾಯ್ಟ್‌ದಲ್ಲಿ ಕುಮಾರಿ ಕಾವೇರಿ ಲಮಾಣಿ, ಪ್ರಿಯಾಂಕ ಎ ಎಸ್ ಬಾಲಕಿಯರ ಖೋಖೋ ಕುಮಾರಿ ಅಪೇಕ್ಷಾ, ವೀಣಾ, ಬಾಲಕರ ಟೆನಿಕ್ವಾಯ್ಟ್‌ನಲ್ಲಿ ಕುಮಾರ ಹೇಮಂತ, ಮತ್ತು ಬಸವರಾಜ. ಬಾಲಕರ ಬ್ಯಾಡ್ಮಿಂಟನಲ್ಲಿ ಕುಮಾರ ಲಾರೆನ್ಸ್ ಡಿಲಿಮಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರಾದ ಸಿಸ್ಟರ್ ಅಮಲಾ ಹಾಗೂ ಉಪನ್ಯಾಸಕ ವೃಂದ ಹರ್ಷ ವ್ಯಕ್ತ ಪಡಿಸಿ ಶುಭಕೊರಿದ್ದಾರೆ.
ಕ್ರೀಡಾಕೂಟ: ಜೆಎಂಜೆ ವಿದ್ಯಾರ್ಥಿಗಳ ಸಾಧನೆ
