Slide
Slide
Slide
previous arrow
next arrow

ಹಿಂದಿ ಶಿಕ್ಷಕ ಚಂದ್ರಶೇಖರ್ ಎಸ್.ಸಿ.ಗೆ ‘ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ‌’ ಪ್ರಕಟ

300x250 AD

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಚಿಕ್ಕವಯಸ್ಸಿನಲ್ಲಿಯೇ ಹಿಂದಿ ವಿಷಯದ ವ್ಯಾಕರಣದ ಮೇಲೆ ಪುಸ್ತಕ ಬರೆದು ತನ್ನ ಸಹಪಾಠಿಗಳೊಂದಿಗೆ ಕೀರ್ತಿ ಹೊಂದಿದ ಹಿಂದಿ ವಿದ್ವಾನ್ ಪಂಡಿತ ಹೋಲಿ ರೋಜರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಚಂದ್ರಶೇಖರ್ ಎಸ್.ಸಿ.ರವರು ಈ ಸಾಲಿನ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ದೂರದ ಮೈಸೂರು ನಾಡಿನಿಂದ ಬಂದು ಬೀಸ್ಗೋಡಿನ ಮಣ್ಣಿನ ಜೊತೆ ಬೆರೆತು ಯಲ್ಲಾಪುರದ ಸೊಗಡನ್ನು ಮೇಳೈಸಿಕೊಂಡು ಶ್ರೀಮಂತಿಕೆ ಜೊತೆಗಿದ್ದರೂ ಎಲ್ಲವನ್ನು ಬಿಟ್ಟು ಭೈರಾಗಿಯಾಗಿ ಬಂದ ತಂದೆ ಸುಬ್ಬರಾವ್ ಮತ್ತು ತಾಯಿ ಕಾಂತಮ್ಮನ ತುಂಬು ಸಂಸಾರದಲ್ಲಿ ಸಸ್ಯಶ್ಯಾಮಲೆ ನಾಡಾದ ಯಲ್ಲಾಪುರದಲ್ಲಿ ಬದುಕನ್ನು ಕಟ್ಟಿಕೊಂಡರು. ಶಾಲೆ ಬಗ್ಗೆ ವಿಶೇಷವಾದ ಆಸಕ್ತಿ ಇಲ್ಲದಿದ್ದರೂ ಸಹ ತಮ್ಮ ಅತ್ಯಂತ ಪ್ರೀತಿಯ ವಿಷಯವಾದ ಹಿಂದಿ ಭಾಷೆಯ ಮೇಲೆ ಬದುಕನ್ನು ಕಟ್ಟಿಕೊಂಡರು. ಅಂದಿನ ಯಲ್ಲಾಪುರದ ಎಲ್ಲಾ ಗ್ರಾಮೀಣ ಐಶ್ವರ್ಯಗಳ ನಡುವೆ ಹೋಲಿರೋಜರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಮುಂದೆ ಅಲ್ಲಿಯೇ ತಮ್ಮ ಶಿಕ್ಷಕ ವ್ರತ್ತಿಯನ್ನು ಪ್ರಾರಂಭಿಸಿದರು. ಕಲಿತ ಶಾಲೆಯಲ್ಲಿಯೇ ಶಿಕ್ಷಕರಾಗಿ 1991 ನೇ ಇಸವಿಯಿಂದ ಹಿಂದಿ ಶಿಕ್ಷಕರಾಗಿ ಕಾರ್ಯ ಪ್ರಾರಂಭಿಸಿದರು. ಹೋಲಿ ರೋಜರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನೇಕ ಸಂಕಷ್ಟಗಳ ನಡುವೆಯೂ ಸಹ ತಮ್ಮ ಸಂಸ್ಥೆಗಾಗಿ ಹಗಲಿರುಳು ಶ್ರಮಿಸಿದರು. ಹಿಂದಿ ಸರ್ ಎಂಬ ಅನ್ವರ್ಥಕ ನಾಮದಿಂದ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಹಿಂದಿ ವಿಷಯ ಅಧ್ಯಯನ ಹಾಗೂ ಪ್ರಚಾರ ಮಾಡುವ ವ್ಯಕ್ತಿಯಾದರು. ಕೆಲವು ಕಾಲ ಹಿಂದಿ ಪ್ರಚಾರ ಸಮಿತಿಯ ಪರೀಕ್ಷೆಗಳ ಸಂಘಟಕರಾಗಿಯೂ ಕಾರ್ಯನಿರ್ವಹಿಸಿದರು. ತಾವು ಕಲಿಸುವ ಹಾಗೂ ಪ್ರೀತಿಸುವ ವಿಷಯವನ್ನು ಅತ್ಯಂತ ಉತ್ಕೃಷ್ಟತೆಯಿಂದ ಅದೇ ರೀತಿಯಾಗಿ ಉಗ್ರ ಸ್ವರೂಪದ ಸ್ವಾರ್ಥಿಯಾಗಿ ಆಲೋಚನೆ ಕ್ರಮವನ್ನು ತೆಗೆದುಕೊಂಡಿದ್ದರ ಫಲವಾಗಿ ಸತತ 31 ವರ್ಷಗಳಿಂದಲೂ ನೂರಕ್ಕೆ ನೂರರಷ್ಟು ಪ್ರತಿಶತ ಫಲಿತಾಂಶವನ್ನು ಶಾಲೆಯಲ್ಲಿ ಪಡೆದಿದ್ದಾರೆ. ನಿಷ್ಠುರವಾಗಿ ತಾವು ಕಲಿಸುವ ವಿಷಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಇವರು ಶಿಕ್ಷಣ ಇಲಾಖೆಯ ಕೊಡುವ ಎಲ್ಲ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಇಲಾಖೆಯ ಮಹತ್ವದ ಕಾರ್ಯಗಳಾದ ಮೌಲ್ಯಮಾಪನ ಕೇಂದ್ರದ ಮುಖ್ಯಸ್ಥರಾಗಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ, ಹಿಂದಿ ಸಂಘಟಕರಾಗಿ ,ಹಿಂದಿ ಸಂಘದ ಅಧ್ಯಕ್ಷರಾಗಿ ಜಿಲ್ಲಾ ಸಭಾ ಶಿಕ್ಷಕರ ಸಂಘದ ತಾಲೂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾ ಮಟ್ಟದ ಡಯಟ್ ಹಾಗೂ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಾಗಿ ಹಿಂದಿ ವಿಷಯದ ಮಾರ್ಗದರ್ಶಕರಾಗಿ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಚಿರಪರಿಚಿತರಾಗಿದ್ದಾರೆ. ಅದೇ ರೀತಿ ಜಿಲ್ಲಾ ಹಿಂದಿ ಸಂಘದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಿ ತನ್ನ ಜ್ಞಾನಸುಧೆಯನ್ನು ಎಲ್ಲರಿಗೂ ತಿಳಿಸುತ್ತಾ ಬಂದಿದ್ದಾರೆ.

ಇದೊಂದು ಭಾಗವಾದರೆ ಇನ್ನೊಂದು ಮುಖ ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ಅವರು ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಾ ಅದರಲ್ಲಿಯೂ ಸಹ ಜಿಲ್ಲಾ, ರಾಜ್ಯ ಮಟ್ಟದ ಸಂಘಟಕರಾಗಿ ತರಬೇತಿಯ ನಿರ್ವಹಣೆ ಮಾಡುತ್ತ ತರಬೇತಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಘನತೆಯನ್ನು ಉನ್ನತಕ್ಕೆ ಏರಿಸುವ ವ್ಯಕ್ತಿಯಾಗಿದ್ದಾರೆ. ತಮ್ಮ ಶಾಲೆ ಹಾಗೂ ತಮ್ಮ ಜಿಲ್ಲೆ ಮಕ್ಕಳನ್ನು ರಾಜ್ಯ ಮತ್ತು ರಾಷ್ಟ್ರ ಪುರಸ್ಕಾರ ಪಡೆಯುವಂತೆ ಮಾಡುವುದು ಹಾಗೂ ರಾಜ್ಯೋತ್ಸವದ ಪಥ ಸಂಚಲನದಲ್ಲಿ ತಮ್ಮ ವಿದ್ಯಾರ್ಥಿ ಭಾಗವಹಿಸುವಂತೆ ಮಾಡಿದ್ದು ಅವರ ಸೇವೆಯ ವಿಶೇಷತೆ. ಈ ಸಂಸ್ಥೆಯ ಮುಖ್ಯ ವ್ಯಕ್ತಿಯಾಗಿ ಅದರ ಅಧ್ಯಕ್ಷರಿಂದಲೂ ಪ್ರಶಂಸೆಗೆ ಒಳಪಟ್ಟಿರುವವರಾಗಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಗೆ ಅವರು ಇಂದು ಹೆಮ್ಮರವಾಗಿ ಬೆಳೆದಿದ್ದಾರೆ. ರಾಷ್ಟ್ರಮಟ್ಟದ ಹಾಗೂ ವಿಶ್ವದ ಮಟ್ಟದ ಅನೇಕ ಜಾಂಬೂರಿಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಿರುವುದು ಅವರ ಹೆಮ್ಮೆಯ ಸಾಧನೆ. ಮೂಡಬಿದರೆ ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಯೋಚಿತವಾಗಿ ತೊಡಗಿಸಿಕೊಂಡು ಶಿರಸಿ ಶೈಕ್ಷಣಿಕ ಜಿಲ್ಲೆಯ ಮುಖ್ಯಸ್ಥರಾಗಿರುವುದು ಅವರ ವಿಶೇಷತೆ ಆಗಿತ್ತು.
ತಾನಿರುವ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿ ತೊಡಗಿಕೊಂಡಿರುವ ಚಂದ್ರಶೇಖರ್ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮಾತೃಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳಾಗಿ ಸಂಘಟನೆಯಲ್ಲಿ ತೊಡಿಸಿಕೊಂಡಿದ್ದಾರೆ. ಯಲ್ಲಾಪುರದಲ್ಲಿ ಹಿಂದಿ ವಿಷಯದ ಯಾವುದೇ ಚರ್ಚೆ ಸಮಸ್ಯೆ ಬಂದರೆ ಮುಂಚೂಣಿಯಲ್ಲಿದ್ದು ತನ್ನ ಮಕ್ಕಳಿಗೆ ರಾಷ್ಟ್ರಭಾಷೆ ಬಗ್ಗೆ ಹೆಮ್ಮೆ ಬರುವ ಹಾಗೆ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಪ್ರೀತಿಸುವ ವಿಜ್ಞಾನ ವಿಷಯದಲ್ಲಿಯೂ ಸಹ ನಾಟಕ ನಿರ್ದೇಶಕರು ರಾಜ್ಯಮಟ್ಟದ ಉತ್ತಮ ನಿರ್ದೇಶಕರಾಗಿ ಅಲ್ಲಿಯೂ ಸಹ ಕೃಷಿ ಮಾಡಿದ್ದಾರೆ .ಚರ್ಚಾ ಸ್ಪರ್ಧೆ ಕಾರ್ಯಕ್ರಮ ನಿರೂಪಣೆ, ಸಂಘಟನೆ, ಹೀಗೆ ಹಲವಾರು ದಶಮುಖಗಳ ವ್ಯಕ್ತಿತ್ವ ಹೊಂದಿದ ಇವರು ತನ್ನ ವಿಷಯದ ಬಗ್ಗೆ ಜಾಗೃತಿ ಪರಿಶ್ರಮ ಹಾಗೂ ಸಾಧನೆ ಮಾಡಿದ ಹಿರಿಯ ಶಿಕ್ಷಕರಿಗೆ ಉತ್ತಮ ಪ್ರಶಸ್ತಿ ಬರುವಂತಾಗಲಿ ಆ ಕ್ಷೇತ್ರದಿಂದ ಇವರು ಸೇವೆಯನ್ನು ಪಡೆದು ಗುರುತಿಸಿ ಬೆಳೆಯಲಿ ಎಂದು ಆಶಿಸುತ್ತೇನೆ .
ಜೀವನಕ್ಕಾಗಿ ಕಲಿತ ಭಾಷೆ, ಹಲವರಿಗೆ ಜೀವನ ಕೊಟ್ಟ ಭಾಷೆ, ಹಲವರಿಂದ ಪ್ರಶಂಶಿಸಿ ಪ್ರಶಸ್ತಿ ಪಡೆದ ಹಿಂದಿ ಭಾಷಾ ರತ್ನ ಚಂದ್ರಶೇಖರ ಸೇವೆ ಅನನ್ಯವಾದುದು. ಈ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ.

300x250 AD

ಎಂ.ರಾಜಶೇಖರ
ವಿಜ್ಞಾನ ಶಿಕ್ಷಕರು ಹೋಲಿ ರೋಜರಿ ಪ್ರೌಢಶಾಲೆ ಯಲ್ಲಾಪುರ
ವಿಜ್ಞಾನ ಸಂವಹನಾಕಾರರು
ಜಿಲ್ಲಾ ಸಂಚಾಲಕರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು

Share This
300x250 AD
300x250 AD
300x250 AD
Back to top