ಯಲ್ಲಾಪುರ: ತಾಲೂಕಿನ ಉಮ್ಮಚ್ಚಗಿಯ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಯು 2023-24 ನೇ ಸಾಲಿನಲ್ಲಿ 2,51,922 ರೂ. ಲಾಭಗಳಿಸಿದ್ದು, ರೈತರ ಶೇರುಧನದ ಮೇಲೆ 7.48 ರೂ. ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ಶಿಪಾರಸ್ಸು ಮಾಡಿದೆ ಎಂದು ಕಂಪನಿಯ ತೃತೀಯ ವರ್ಷದ ಅಢಾವೆ ಪತ್ರಿಕೆಯಲ್ಲಿ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ರೈತರ ಹಲವಾರು ಕೆಲಸಗಳಿಗೆ ಸ್ಪಂದಿಸಿ,ಕಂಪನಿಯ ಇತಿಮಿತಿಯಲ್ಲಿ ವಿವಿಧ ಸೇವೆಗಳನ್ನು ನೀಡುತ್ತಿರುವ ಉಮ್ಮಚ್ಚಗಿಯ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಯು 30,00,000 ರೂ. ಶೇರು ಬಂಡವಾಳವನ್ನು ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು 38,56,233 ರೂ. ವಹಿವಾಟನ್ನು ನಡೆಸಿರುವುದು ಹೆಮ್ಮೆಯ ಸಂಗತಿ.
ಈ ಕಂಪನಿಯೂ ಚಾಲಿ ಸುಲಿಯುವುದು, ಮದ್ದು ಸಿಂಪಡಿಸುವುದು, ಕಾರ್ಬನ್ ಪೈಬರ್ ದೋಟಿ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ಕೆಲಸದವರ ಸಮೇತ ಬಾಡಿಗೆಗೆ ಒದಗಿಸುತ್ತಾ ಬಂದಿದೆ. ಅಲ್ಲದೇ, ಸದಸ್ಯರ ಬೇಡಿಕೆಯ ಅನುಸಾರ ಗೊಬ್ಬರ, ಬೇವಿನ ಪುಡಿ, ಸುಣ್ಣ ಮುಂತಾದ ವಸ್ತುಗಳನ್ನು ಸಹಾ ಯೋಗ್ಯದರದಲ್ಲಿ ಪೂರೈಸುತ್ತಿದೆ. ಮುಂದಿನ ದಿನಗಳಲ್ಲಿ ಅಡಕೆ ಗೊನೆ ಕಟಾವು, ಹಸಿ ಅಡಕೆ ಸುಲಿಯುವ ಸಂಸ್ಕರಣೆ ಘಟಕ ಇಂಥಹ ರೈತರಿಗೆ ಅವಶ್ಯಕತೆ ಇರುವ ಕೆಲಸಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ. ಅಡಕೆಯ ಮೌಲ್ಯವರ್ಧನೆ ಮಾಡುವ ಗುರಿಯನ್ನು ಇಟ್ಟುಕೊಂಡಿರುವ ಈ ಕಂಪನಿಯೂ ವರುಷದಿಂದ ವರುಷಕ್ಕೆ ಪ್ರಗತಿಯತ್ತ ಸಾಗುತ್ತಿದೆ.
ವಾರ್ಷಿಕ ಸಭೆ: ಉಮ್ಮಚ್ಚಗಿಯ ಸರ್ವಜ್ಞೇಂದ್ರ ರೈತ ಉತ್ಪಾದಕ ಕಂಪನಿಯ ತೃತೀಯ ವರುಷದ ವಾರ್ಷಿಕ ಸಭೆಯು ಇಂದು ಸೆ. 28 ರ ಬೆಳಿಗ್ಗೆ 11 ಘಂಟೆಗೆ ಕಂಪನಿಯ ಕಛೇರಿ ಗಿರಣಿಮನೆ ಕಟ್ಟಡದಲ್ಲಿ ನಡೆಯಲಿದೆ ಎಂದು ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ.