Slide
Slide
Slide
previous arrow
next arrow

ಬಿಸಿಬಿಸಿ ಚರ್ಚೆಗಳೊಂದಿಗೆ ಸುದೀರ್ಘವಾಗಿ ನಡೆದ ಯಲ್ಲಾಪುರ ಪ.ಪಂ.ಸಾಮಾನ್ಯ ಸಭೆ

300x250 AD

ಯಲ್ಲಾಪುರ : ಯಲ್ಲಾಪುರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಪ.ಪಂ. ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ ಆಡಳಿತಾಧಿಕಾರಿಯ 17 ತಿಂಗಳ ಅವಧಿ ಹಾಗೂ ಹಿಂದಿನ ಜಾತ್ರೆಯಲ್ಲಿ ನಡೆದ ಜಮಾ ಖರ್ಚುಗಳ ಕುರಿತು ವಿಶೇಷ ಸಭೆಯ ಕರೆಯಬೇಕೆಂದು ಶಾಸಕರು ಸೂಚಿಸಿದ್ದರೂ, ಸಭೆ ಕರೆಯದೇ ಇರುವ ಕುರಿತು ಶಾಸಕರ ಮಾತಿಗೂ ಮನ್ನಣೆ ಇಲ್ಲವೇ ಎಂದು ಆಕ್ಷೇಪ ವ್ಯಕ್ತವಾಯಿತು. ಮೀಟಿಂಗ್ ಕುರಿತಾದ ಮಾಹಿತಿ ಪತ್ರಿಕೆಯನ್ನು ನಿಯಮಾವಳಿಯಂತೆ 7 ದಿನಗಳ ಪೂರ್ವದಲ್ಲಿ ನೀಡದೇ ಕೇವಲ 3 ದಿನ ಪೂರ್ವದಲ್ಲಿ ಮಾತ್ರ ನೀಡಲಾಗಿದೆ, ಆಡಳಿತಾಧಿಕಾರಿ ಅವಧಿಯ 17 ತಿಂಗಳ ಖರ್ಚು ವೆಚ್ಚದ ಮಾಹಿತಿಯನ್ನು ಸದಸ್ಯರಿಗೆ ಏಕೆ ನೀಡಲಿಲ್ಲ. ನಮ್ಮನ್ನು ಅಧಿಕಾರದಲ್ಲಿಟ್ಟು ಮಾಹಿತಿ ನೀಡದೇ ಇರಲು ಸರಕಾರದ ಸುತ್ತೋಲೆ ಇದೆಯಾ ಎಂದು ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮೇಶ್ವರ ನಾಯ್ಕ, ಸುನಂದಾ ದಾಸ್ ಆಕ್ಷೇಪಿಸಿದರು.

ವಾರ್ಡ್ ಸದಸ್ಯರ ಗಮನಕ್ಕೆ ತರದೇ ಕಾಮಗಾರಿ ಹಾಕಲಾಗಿದೆ. ಕಾಮಗಾರಿ ಹಾಕುವಾಗ ವಾರ್ಡ ಸದಸ್ಯರನ್ನು ವಿಶ್ವಾಸಕ್ಕೆ ಯಾಕೆ ತೆಗೆದುಕೊಂಡಿಲ್ಲ ಎಂದು ರಾಮಾಪುರ ವಾರ್ಡಿನ ಸದಸ್ಯೆ ಕಲ್ಪನಾ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ನೀವು ತಿಳಿಸಿದ ಕಾಮಗಾರಿ ಹೊರತಾಗಿ ಅಧ್ಯಕ್ಷರ ವಿವೇಚನೆಯಿಂದ ಹೆಚ್ಚುವರಿ ಕಾಮಗಾರಿ ಹಾಕಲಾಗಿದೆ ಎಂದು ಸತೀಶ ನಾಯ್ಕ ಸಮಜಾಯಿಸಿ ನೀಡಲು ಯತ್ನಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ತೀವ್ರವಾದ ಮಾತಿನ ಚಕಮಕಿ ನಡೆಯಿತು.

300x250 AD

ಪಟ್ಟಣ ಪಂಚಾಯಿತಿ ಕಚೇರಿಯಿಂದ ಕಡತ ಕಳ್ಳತನವಾದ ಬಗ್ಗೆ ದೂರು ದಾಖಲಿಸುವಾಗ ಆಡಳಿತಾಧಿಕಾರಿಗಳ ಅನುಮತಿ ಪಡೆದಿದ್ದೀರಾ ಎಂದು ಸದಸ್ಯ ಸೈಯ್ಯದ ಕೈಸರ್ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿ ಪ್ರಕರಣ ಈಗ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿ, ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಬೇಜವಾಬ್ದಾರಿಗೆ ಏನು ಕ್ರಮಕೈಗೊಂಡಿದ್ದೀರಿ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯೆ ಕಚೇರಿಯಲ್ಲಿ ಕಾಗದ ಪತ್ರಗಳಿಗೇ ಭದ್ರತೆಯಿಲ್ಲ, ನನ್ನ ವಾರ್ಡಿನ ಹಲಸ್ಕಂಡ ಪ್ರದೇಶಕ್ಕೆ ಸಂಬಂಧಿಸಿದ ಕಾಮಗಾರಿ ಫೈಲ್ ಕೂಡ ಕಳೆದು ಹೋಗಿದೆ ಹೀಗಾದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು. ಸಾರ್ವಜನಿಕರು ಬಂದು ಅಧಿಕಾರಿಗಳ ಮೇಲೆ ಗೂಂಡಾ ಪ್ರವೃತ್ತಿ ತೋರುತ್ತಿದ್ದಾರೆ ಇಂತವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸತೀಶ ನಾಯ್ಕ ಮತ್ತು ಇತರರು ಆಕ್ಷೇಪಿಸಿದರು.

ಕಾಮಗಾರಿಯ ವಿವರದಲ್ಲಿ ಬರ‍್ವೆಲ್ ಗಳ ಪೈಪ್ಗಳನ್ನು ಬದಲಿಸಲು 24 ಲಕ್ಷ ರೂ. ಇಡಲಾಗಿದೆ. ಒಂದೆಡರಡು ವರ್ಷದಲ್ಲಿ ಶಾಶ್ವತ ನೀರಿನ ಯೋಜನೆ ಕಾರ್ಯಾರಂಭ ಮಾಡುವುದರಿಂದ ಇಷ್ಟೊಂದು ಮೊತ್ತ ವೆಚ್ಚ ಮಾಡುವ ಅಗತ್ಯತೆ ಇದೆಯೇ ಎಮದು ಕೆಲ ಸದಸ್ಯರು ಆಕ್ಷೇಪಿಸಿದರು. ತೀರಾ ಅಗತ್ಯ ಇರುವಲ್ಲಿ ಮಾತ್ರ ಪೈಪ್ ಬದಲಿಸಲು ಸಭೆ ಅನುಮತಿ ನೀಡಿತು. ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದು, ಸದಸ್ಯರು ಅನುಮೋದನೆ ನೀಡಿದರು. 9 ಸ್ಥಾಯಿ ಸಮಿತಿ ಸದಸ್ಯರ ಪರವಾಗಿ ಅಬ್ದುಲ್ ಅಲಿ ಕೆ. ಹಮೀದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಉಪಾಧ್ಯಕ್ಷ ಅಮಿತ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಕೆ. ಹಮೀದ ಮುಖ್ಯಾಧಿಕಾರಿ ಸುನೀಲ ಗಾವಡೆ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top