Slide
Slide
Slide
previous arrow
next arrow

ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ: ನಾರಾಯಣ ಎಂ.

300x250 AD

ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಎಷ್ಟು ಉಪಯೋಗವಿದೆಯೊ ಅಷ್ಟೆ ಹಾನಿಯೂ ಇದ್ದು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನಾರಾಯಣ ಎಂ. ಹೇಳಿದರು.

ಅವರು ಗುರುವಾರ ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಸೈಬರ್ ಕ್ರೈಂ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಸೈಬರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು

ಬ್ಯಾಂಕ್, ಆಸ್ಪತ್ರೆ, ಜೆರಾಕ್ಸ್ ಅಂಗಡಿ, ಪ್ರಯಾಣಿಸುವಾಗ, ವಿಮಾನ ನಿಲ್ದಾಣ, ದೊಡ್ಡ ಮಾಲ್, ಸೀಮ್ ಖರೀದಿ, ಆಸ್ಪತ್ರೆ ಆನ್‌ಲೈನ್ ಅಪ್ಲಿಕೇಶನ್ ಹೀಗೆ ಹಲವು ಕಡೆಗಳಲ್ಲಿ ನಮ್ಮ ವೈಯಕ್ತಿಕ ದಾಖಲೆ, ಮಾಹಿತಿಯನ್ನು ನೀಡಿರುತ್ತೆವೆ. ಕೆಲವೊಮ್ಮೆ ಇದು ಸೋರಿಕೆಯಾಗಿ, ಇದನ್ನು ಪಡೆದ ಸೈಬರ್ ಕಳ್ಳರು ನಮ್ಮ ಚಲನವಲನಗಳನ್ನು ಗಮನಿಸಿ ನಮ್ಮ ಅವಶ್ಯಕ್ಕೆ ಅನುಗುಣವಾಗಿ ಮರಳು ಮಾಡುತ್ತಾರೆ. ಉದ್ಯೋಗ ಕೊಡಿಸುವುದಾಗಿ, ಉಡುಗೊರೆ ನೀಡುವುದಾಗಿ, ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವದಾಗಿ ಹೀಗೆ ಅವರ ಆಸಕ್ತಿಯನ್ನೆ ಬಂಡವಾಳ ಮಾಡಿಕೊಂಡು ಹಣದೋಚುತ್ತಾರೆ. ಫೇಸ್‌ಬುಕ್ ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ಗೆಳೆತನ ಮಾಡುವಾಗ ಚೆನ್ನಾಗಿ ಅರಿತುಕೊಳ್ಳಬೇಕು. ಸುಂದರ ಯುವತಿಯರಿಗೆ ಬಲೆ ಬೀಸಿ ಮಾನವಕಳ್ಳ ಸಾಗಣೆಗೆ ದೂಡಿದ ಕೆಲವು ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಝೆರಾಕ್ಸ್ ಮಾಡಲು ನೀಡಿದ ದಾಖಲೆಗಳನ್ನು ಸೈಬರ್ ಕಳ್ಳರ ಪಾಲಾಗುವ ನಿದರ್ಶನಗಳಿದೆ. ಅದನ್ನು ಪಡೆದ ಅವರು ನಮಗೆ ತಿಳಿಯದೆ ನಮ್ಮ ಖಾತೆಗಳನ್ನು ತೆರೆದು ಬೇರೆಯವರಿಗೆ ವಂಚಿಸಿದ ಹಲವು ಪ್ರಕರಣಗಳು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಡುವ ವಿಷಯಗಳ ಗಂಭೀರತೆ ಅರಿತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಸುಳ್ಳು ಸಂದೇಶಗಳನ್ನು ಕಳುಹಿಸದವರಿಗೂ ಶಿಕ್ಷೆ ಖಚಿತ. ಮತಗಳ ನಡುವೆ ಕಲಹ, ಧರ್ಮಗಳ ನಡುವೆ ಜಗಳ, ಧರ್ಮಾಂದತೆ ಸೃಷ್ಟಿಸಿ ಮಕ್ಕಳ ಮನಸ್ಸು ಪರಿವರ್ತನೆ ಮಾಡಿ ದೇಶದ್ರೋಹ, ಭಯೋತ್ಪಾದನೆಯಂತಹ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿರುವದು ಸೈಬರ್ ಜಗತ್ತಿನಲ್ಲಿ ನಡೆಯುತ್ತಿದ್ದು ಇವುಗಳಿಂದ ಜಾಗೃತರಾಗಿರಬೇಕು.

300x250 AD

ಹೆಚ್ಚುತ್ತಿರುವ ಕ್ರೌರ್ಯ, ಕಳವಳ ವ್ಯಕ್ತಪಡಿಸಿದ ಎಸ್‌ಪಿ.
ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಬರ್ಬರ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಚಾಕುವಿನಿಂದ ಇರಿತ, ಸಣ್ಣ ವಿಷಯಕ್ಕೂ ಕೊಲೆಗಳು ಸೇರಿದಂತೆ ಹಿಂಸೆ ನೀಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮಲು ಪದಾರ್ಥ ಸೇವೆನೆ, ಸಿನೆಮಾ, ಒಟಿಟಿಯಲ್ಲಿ ತೋರಿಸುವ ಜಗತ್ತು ನಿಜವಾದುದಲ್ಲ. ನಾವು ಬದುಕುತ್ತಿರುವ ಪ್ರಪಂಚವೆ ಸತ್ಯ. ಅಂತಹ ದೃಶ್ಯಗಳನ್ನು ನೋಡಿ ಪ್ರೇರಪಣೆಗೊಂಡು ದೌರ್ಜನ್ಯ ನಡೆಸಿದರೆ ಶಿಕ್ಷೆ ಅನುಭವಿಸುವದು ಖಚಿತ. ಅಂತವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸದಾ ಕಣ್ಗಾವಲು ಇಟ್ಟಿದೆ. ವಿದ್ಯಾರ್ಥಿಗಳು ಜಾಗರೂಕರಾಗಿದ್ದು, ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆ, ಹುಟ್ಟಿದ ಊರು, ಪಾಲಕರಿಗೆ ಗೌರವ ತರುವ ಕೆಲಸವಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. .

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮಹೇಶ ಎಂ.ಕೆ, ಪಿಐ ಗೋಪಿಕೃಷ್ಣನ ಕೆ.ಆರ್, ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಶ ನಾಯಕ, ಟ್ರಸ್ಟಿ ಮ್ಯಾನೆಜರ್ ರಾಜೇಶ ನಾಯಕ ಇದ್ದರು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರೆ, ಪತ್ರ‍್ರಿಕೋಧ್ಯಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top