ಶಿರಸಿ: ಇಲ್ಲಿನ ಗಣೇಶನಗರದ ಹೊಸ ಬಸ್ ನಿಲ್ದಾಣದ ಎದುರಿನ ಹುಲೇಕಲ್ ರಸ್ತೆಯ ಸಾರ್ವಜನಿಕ ಸ್ಧಳದಲ್ಲಿ ಮಟಕಾ ದಂದೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಣೇಶನಗರದ ಮಾರುತಿ ದೇವಸ್ಥಾನದ ಹಿಂಭಾಗದ ಉಮೇಶ ವೆಂಕಟು ನಾಯ್ಕ (48) ಬಂಧಿತ ವ್ಯಕ್ತಿ.
ಈತ ತನ್ನ ಲಾಭಕ್ಕೊಸ್ಕರ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಅಂಕೆ ಸಂಖ್ಯೆಗಳ ಮೇಲೆ ಪಂತಕಟ್ಟಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದ ವೇಳೆ ನಗರ ಠಾಣೆ ಪಿ.ಎಸ್.ಐ ನಾಗಪ್ಪ.ಬಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, 1200 ರೂ. ನಗದು ಓ.ಸಿ ಅಂಕೆ ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾದಲ್ಲೂ ಪೋಲಿಸ್ ದಾಳಿ
ಕುಮಟಾ: ತಾಲೂಕಿನ ಮಿರ್ಜಾನ್ ಬಳಿಯ ಸೈಮನ್ ಲಾರೆನ್ಸ್ ರೋಡಿಗ್ರಿಸ್ ಸಹ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಪಿಎಸ್ಐ ಯೋಗೀಶ್ ಆತನ ಮೇಲೆ ದಾಳಿ ನಡೆಸಿದ್ದು, ಆತನಲ್ಲಿದ್ದ ಹಣ ಹಾಗೂ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.