ಯಲ್ಲಾಪುರ: ವಿವಿಧ ಕಾರಣಕ್ಕಾಗಿ ಆರ್ಥಿಕವಾಗಿ ಸೊರಗಿ ನಿರ್ಜೀವವಾಗಿದ್ದ ಸಹಕಾರಿ ಸಂಸ್ಥೆಯನ್ನು ಕಟ್ಟಿ ಪುನರುಜ್ಜೀವನಗೊಳಿಸಬೇಕೆನ್ನುವ ಆಶಯದಿಂದ ಸಂಸ್ಥೆಯನ್ನು ಸಧೃಢವಾಗಿ ಮುನ್ನೆಡೆಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.
ಅವರು ಶನಿವಾರ ಪಟ್ಟಣದ ಅಡಿಕೆ ಭವನದಲ್ಲಿ ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘದ ಒಂಬತ್ತನೇಯ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಂಘವು 34 ಲಕ್ಷ ರೂ. ಲಾಭ ಮಾಡಿದೆ. ಸಂಘವು ಸದಸ್ಯರ ಸಹಕಾರದಿಂದ ಪ್ರಗತಿ ಪಥದಲ್ಲಿ ಮುನ್ನೆಡೆದಿದೆ ಎಂದರು.
ಸಂಘದ ಉಪಾಧ್ಯಕ್ಷ ಕೆಟಿ ಹೆಗಡೆ,ಗೌರವ ಸಲಹೆಗಾರ ಪಿ.ಜಿ.ಹೆಗಡೆ,ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ನಿರ್ದೇಶಕರಾದ ರಾಧಾ ಹೆಗಡೆ,ನಾಗೇಂದ್ರ ಭಟ್ಟ, ಜೈರಾಮ ಹೆಗಡೆ,ಶ್ರೀಪಾದ ಮೆಣಸುಮನೆ,ಜ್ಯೋತಿ ದೇಸಾಯಿ ನ್ಯಾಯವಾದಿ ಪ್ರಕಾಶ ಭಟ್ಟ, ವ್ಯವಸ್ಥಾಪಕ ರವೀಂದ್ರ ದೇಸಾಯಿ ವರದಿ ಮಂಡಿಸಿದ್ದರು. ಅದೃಷ್ಟವಂತ ಠೇವಣಿದಾರ ಶ್ರೀಧರ ಅರೆಗುಳಿ, ಅದೃಷ್ಟವಂತ ಸಾಲಗಾರರಾಗಿ ಈರಮ್ಮ ಬೋವಿವಡ್ಡರ್ ಅವರನ್ನು ಸನ್ಮಾನಿಸಲಾಯಿತು.